ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ ರಾಜಸ್ಥಾನದಲ್ಲಿ ಕರ್ನಾಟಕದ ಯೋಧ ಸಾವು.. - ಯೋಧ ಸಾವು ಚಿಕ್ಕೋಡಿ ಸುದ್ದಿ

ರಾಜಸ್ಥಾನದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಗ್ರಾಮದ ಯೋಧ ಜಲಾಲುದ್ದೀನ್ ಅಮ್ಮಣಗಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಕರ್ನಾಟಕದ ಯೋಧ

By

Published : Nov 19, 2019, 10:25 PM IST

ಚಿಕ್ಕೋಡಿ:ರಾಜಸ್ಥಾನದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಗ್ರಾಮದ ಯೋಧ ಜಲಾಲುದ್ದೀನ್ ಅಮ್ಮಣಗಿ ಸೋಮವಾರ ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಶಿರಹಟ್ಟಿ ಬಿಕೆ ಗ್ರಾಮದ ಜಲಾಲುದ್ದೀನ್ ಅಮ್ಮಣಗಿ ಅಸುನೀಗಿದ್ದು, ಯೋಧನ ಪಾರ್ಥಿವ ಶರೀರ ಬುಧವಾರ ಶಿರಹಟ್ಟಿಗೆ ತರಲಾಗುತ್ತೆ. ಯೋಧನ ಅಂತ್ಯ ಸಂಸ್ಕಾರಕ್ಕೆ ಸ್ವಗ್ರಾಮ ಶಿರಹಟ್ಟಿಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ಇನ್ನು, ಬರುವ ಏಪ್ರಿಲ್‌ನಲ್ಲಿ ನಿವೃತ್ತಿಯಾಗಬೇಕಿದ್ದ ಯೋಧ ಜಲಾಲುದ್ದೀನ್‌ ಸಾವಿಗೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details