ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನ ಸಂಚರಿಸಲು ಬಿಡಲ್ಲ: ಮೆಹಬೂಬ್ ಶೇಖ್ - Karnataka vehicles are not allowed to travel in Maharashtra

ಕರ್ನಾಟಕದ ಯಾವುದೇ ವಾಹನಗಳನ್ನು ಮಹಾರಾಷ್ಟ್ರದಲ್ಲಿ ಸಂಚರಿಸಲು ಬಿಡಲ್ಲ. ಬೆಳಗಾವಿ ಸೇರಿಸಿ ಸಂಯುಕ್ತ ಮಹಾರಾಷ್ಟ್ರ ಮಾಡುವುದು ನಮ್ಮ ಕನಸು ಎಂದು ಎನ್‌ಸಿಪಿ‌ ಯುವ ಘಟಕದ ಅಧ್ಯಕ್ಷ ಮೆಹಬೂಬ್ ಶೇಖ್ ತಿಳಿಸಿದ್ದಾರೆ.

mehboob-sheikh
ಮೆಹಬೂಬ್ ಶೇಖ್

By

Published : Nov 19, 2020, 1:38 PM IST

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕರ್ನಾಟಕದ ವಾಹನಗಳನ್ನು ಸಂಚರಿಸಲು ಬಿಡಲ್ಲ ಎಂದು ಎನ್‌ಸಿಪಿ‌ ಯುವ ಘಟಕದ ಅಧ್ಯಕ್ಷ ಮೆಹಬೂಬ್ ಶೇಖ್ ಹೇಳಿಕೆ ನೀಡಿದ್ದಾರೆ.

ಮೆಹಬೂಬ್ ಶೇಖ್ ಮಾತನಾಡಿದರು

ಮಹಾರಾಷ್ಟ್ರದಲ್ಲಿ ಕರ್ನಾಟಕ ವಾಹನಗಳನ್ನು ಸಂಚರಿಸಲು ಬಿಡಲ್ಲ. ಬೆಳಗಾವಿಯಲ್ಲಿ ಡಿಸಿಎಂ ಅಜಿತ್ ಪವಾರ್‌ಗೆ ಅಪಮಾನ ಮಾಡಲಾಗಿದೆ. ಹೀಗಾಗಿ, ಕರ್ನಾಟಕ ಸಿಎಂ ಹಾಗೂ ಪ್ರತಿಭಟಿಸಿದ ಸಂಘಟನೆಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಕರ್ನಾಟಕದ ಯಾವುದೇ ವಾಹನಗಳನ್ನು ಮಹಾರಾಷ್ಟ್ರದಲ್ಲಿ ಸಂಚರಿಸಲು ಬಿಡಲ್ಲ. ಬೆಳಗಾವಿ ಸೇರಿಸಿ ಸಂಯುಕ್ತ ಮಹಾರಾಷ್ಟ್ರ ಮಾಡುವುದು ನಮ್ಮ ಕನಸು ಎಂದು ತಿಳಿಸಿದ್ದಾರೆ.

ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಡಿಸಿಎಂ ಅಜಿತ್ ಪವಾರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಚಪ್ಪಲಿ ಸೇವೆ ಮಾಡಲಾಗಿತ್ತು.

For All Latest Updates

TAGGED:

ABOUT THE AUTHOR

...view details