ಬೆಳಗಾವಿ :ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಸಭೆ ಮಾಡಬಾರದಿತ್ತು ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಹೇಳಿದರು. ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿ ಗಡಿ ವಿವಾದ ಮುಗಿದ ಅಧ್ಯಾಯ ಮತ್ತೆ ಯಾಕೆ ಈ ಸಭೆ!? ಎಂದು ಪ್ರಶ್ನಿಸಿದರು.
ಒಂದು ಯಥಾವತ್ತಾಗಿ ಕಾಪಾಡಬೇಕು, ಇಲ್ಲಾ ಮಹಾಜನ್ ವರದಿ ಜಾರಿ ಆಗಬೇಕು. ಇದನ್ನ ಬಿಟ್ಟು ಸಭೆ ಮಾಡಿರುವುದು ಸರಿ ಅಲ್ಲ, ರಾಜ್ಯ ಸರ್ಕಾರ ಗಡಿ ವಿಚಾರದಲ್ಲಿ ಭಾರಿ ಪ್ರಮಾಣದ ತಪ್ಪು ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರದ ಮೇಲೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.