ಕರ್ನಾಟಕ

karnataka

ETV Bharat / state

ಚಾಲಕರ ಕೋವಿಡ್ ಟೆಸ್ಟ್ ಕರ್ನಾಟಕ ಸರ್ಕಾರವೇ ಮಾಡಲಿ: ಉದ್ದಟತನ ಮೆರೆದ ಸುಚೇತ್ ಪಾಟೀಲ್​! - sucheth patil talks about covid rules of karnataka

ಸೋಂಕಿತರ ಕ್ವಾರಂಟೈನ್ ಜವಾಬ್ದಾರಿ ಕರ್ನಾಟಕವೇ ವಹಿಸಿಕೊಳ್ಳಬೇಕು. ಕೋವಿಡ್ ವಿಚಾರದಲ್ಲಿ ನಮ್ಮ ಬಸ್ ತಡೆದರೆ, ನಾವು ನಿಮ್ಮ‌ ಬಸ್‌ಗಳನ್ನು ತಡೆಯಬೇಕಾಗುತ್ತೆ ಎಂದು ಕೊಲ್ಲಾಪುರ ಉಸ್ತುವಾರಿ ಸಚಿವ ಸುಚೇತ್ ಪಾಟೀಲ್​ ಉದ್ಧಟತನದ ಹೇಳಿಕೆ ನೀಡಿದ್ದಾರೆ.

sucheth patila
ಸುಚೇತ್ ಪಾಟೀಲ್​

By

Published : Feb 22, 2021, 6:37 PM IST

ಬೆಳಗಾವಿ: ನಾವು ಯಾವುದೇ ಪರೀಕ್ಷೆ ಮಾಡಿಸುವುದಿಲ್ಲ. ಬೇಕಿದ್ದರೆ ಕರ್ನಾಟಕ ಸರ್ಕಾರವೇ ನಮ್ಮ ಚಾಲಕರ ಆರ್​ಟಿಪಿಸಿಆರ್​ ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಕೊಲ್ಲಾಪುರ ಉಸ್ತುವಾರಿ ಸಚಿವ ಸುಚೇತ್ ಪಾಟೀಲ್​ ಉಡಾಫೆಯಾಗಿ ಮಾತನಾಡಿದ್ದಾರೆ.

ಕೊಲ್ಹಾಪುರ ಉಸ್ತುವಾರಿ ಸಚಿವ ಸುಚೇತ್ ಪಾಟೀಲ್​ ಮಾತನಾಡಿದ್ದಾರೆ

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು, ಚಾಲಕ‌, ನಿರ್ವಾಹಕರು ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈ ಕೆಲಸವನ್ನು ಕರ್ನಾಟಕ ಸರ್ಕಾರ ನಮಗೆ ಹೇಳದೇ ತಾನೇ ನಿರ್ವಹಿಸಬೇಕು. ಕರ್ನಾಟಕ ಪ್ರವೇಶಿಸುವ ನಮ್ಮ ಬಸ್‌ಗಳ ಚಾಲಕರು, ನಿರ್ವಾಹಕರ ಆರ್‌ಟಿಪಿಸಿಆರ್ ಟೆಸ್ಟ್ ನೀವೇ ಮಾಡಿಸಿಕೊಳ್ಳಿ ಎಂದಿದ್ದಾರೆ.

ಓದಿ:ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ, ತಪ್ಪೇನಿಲ್ಲ.. ಮಾಜಿ ಸಿಎಂ ಸಿದ್ದರಾಮಯ್ಯ

ಸೋಂಕಿತರ ಕ್ವಾರಂಟೈನ್ ಜವಾಬ್ದಾರಿ ಕರ್ನಾಟಕವೇ ವಹಿಸಿಕೊಳ್ಳಬೇಕು. ಕೋವಿಡ್ ವಿಚಾರದಲ್ಲಿ ನಮ್ಮ ಬಸ್ ತಡೆದರೆ, ನಾವು ನಿಮ್ಮ‌ ಬಸ್‌ಗಳನ್ನು ತಡೆಯಬೇಕಾಗುತ್ತೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details