ಬೆಳಗಾವಿ: ಕನ್ನಡಪರ ಸಂಘಟನೆಗಳ ಮುಖಂಡರು ರೋಲ್‌ಕಾಲ್ ಹೋರಾಟಗಾರರು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಖಂಡಿಸಿ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕರವೇ ಪ್ರತಿಭಟನೆ ನಗರದ ನ್ಯೂ ಸರ್ಕ್ಯೂಟ್ ಹೌಸ್‌ನಿಂದ ಅಶೋಕ ವೃತ್ತವರೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಅಣಕು ಶವಯಾತ್ರೆ ನಡೆಸಿ ಬೆಂಕಿ ಇಟ್ಟು ಬ್ಲ್ಯಾಕ್‌ಮೇಲ್ ಯತ್ನಾಳ್ ವಿರುದ್ಧ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ, ಯಡಿಯೂರಪ್ಪ ಹಾಗೂ ಸರ್ಕಾರ ಬ್ಲ್ಯಾಕ್‌ಮೇಲ್ ಮಾಡಲು ನಮ್ಮನ್ನು ರೋಲ್‌ಕಾಲ್ ಗಿರಾಕಿ ಎನ್ನುತ್ತಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ತಾಕತ್ತಿದ್ರೆ ಬೆಳಗಾವಿಗೆ ಬಂದು ನಿಮ್ಮದೇ ಪಕ್ಷದ ಅಭಯ್ ಪಾಟೀಲ್, ಅನಿಲ್ ಬೆನಕೆ ಜೊತೆಗೂಡಿ ಎಂಇಎಸ್ ವಿರುದ್ಧ ಹೇಳಿಕೆ ನೀಡು, ಆಗ ನಿನ್ನ ಗಂಡಸು ಅಂತೇವೆ ಎಂದು ಸವಾಲು ಹಾಕಿದರು.
ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ. ಕೊರೊನಾ ವಾರಿಯರ್ಸ್‌ಗೆ ಪ್ರೋತ್ಸಾಹ ಹಣ ನೀಡುತ್ತಿಲ್ಲ. ಜಾತಿ ವೈಷಮ್ಯ ಬಿತ್ತಲು ಮರಾಠ ಸಮುದಾಯಕ್ಕೆ ₹50 ಕೋಟಿ ಹಣ ನೀಡ್ತಿದೀರಾ.. ನಾವು ಮರಾಠಾ ಸಮುದಾಯಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ.
ಎಂಇಎಸ್, ಶಿವಸೇನೆಯವರು ಉದ್ಧಟತನ ಹೇಳಿಕೆ ನೀಡುತ್ತಿದ್ದು, ಬಿಜೆಪಿಯ ಯಾರಾದರೂ ಒಬ್ಬ ಎಂಎಲ್ಎ, ಎಂಪಿ ಇದರ ವಿರುದ್ಧ ಹೇಳಿಕೆ ನೀಡಿ ವಿರೋಧಿಸಲಿ ಎಂದು ಸವಾಲು ಹಾಕಿದ್ರು.