ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ನಿಷೇಧ ಮಾಡಿ, ನಾಡದ್ರೋಹಿ ಕೆಲಸ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡುವಂತೆ ಬೆಳಗಾವಿ, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಒತ್ತಾಯ ಮಾಡಿದ್ದಾರೆ.
ನಾಡದ್ರೋಹಿ ಕೆಲಸ ಮಾಡುವವರನ್ನು ಗಡಿ ಪಾರು ಮಾಡುವಂತೆ ಒತ್ತಾಯ - ಬೆಳಗಾವಿಯಲ್ಲಿ ಎಂಇಎಸ್ ನಿಷೇಧ ಮಾಡುವಂತೆ ಒತ್ತಾಯ
ಬೆಳಗಾವಿಯಲ್ಲಿ ಎಂಇಎಸ್ ನಿಷೇಧ ಮಾಡಿ ನಾಡದ್ರೋಹಿ ಕೆಲಸ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡುವಂತೆ ಕರವೇ ಒತ್ತಾಯಿಸಿದೆ.
![ನಾಡದ್ರೋಹಿ ಕೆಲಸ ಮಾಡುವವರನ್ನು ಗಡಿ ಪಾರು ಮಾಡುವಂತೆ ಒತ್ತಾಯ karave deepak gudanakatti pressmeet in Belgavi](https://etvbharatimages.akamaized.net/etvbharat/prod-images/768-512-9392416-755-9392416-1604235200251.jpg)
ಬೆಳಗಾವಿ
ನಾಡದ್ರೋಹಿ ಕೆಲಸ ಮಾಡುವವರನ್ನು ಗಡಿ ಪಾರು ಮಾಡುವಂತೆ ಒತ್ತಾಯ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡದ್ರೋಹಿಗಳು ತಮ್ಮ ಪುಂಡಾಟಿಕೆ ಮುಂದುವರಿಸಿದ್ದಾರೆ. ಆದ್ರೆ, ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಒರೆಸುವ ಕೆಲಸ ಮಾಡಲಾಗುತ್ತಿದ್ದಾರೆ. ಬೈ ಎಲೆಕ್ಷನ್ನಲ್ಲಿ ರ್ಯಾಲಿ ನಡೆಸಲು ಅನುಮತಿ ನೀಡುವ ಸರ್ಕಾರ, ಬೆಳಗಾವಿಯಲ್ಲಿ ರಾಜ್ಯೋತ್ಸವ ಅವಕಾಶ ನೀಡೋದಿಲ್ಲ ಅಂದ್ರೆ ಹೇಗೆ.. ನಾಡದ್ರೋಹಿ ಉಗ್ರರ ರೀತಿಯ ಹಾಗೆ ಇರುವ ಎಂಇಎಸ್‌ಗೆ ಪ್ರತಿಭಟನಾ ಸಭೆಗೆ ಅನುಮತಿ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
Last Updated : Nov 1, 2020, 10:35 PM IST