ಬೆಳಗಾವಿ:ಎರಡೂವರೆ ತಿಂಗಳ ಬಳಿಕ ಕುಂದಾನಗರಿಯಲ್ಲಿ ದೇವಸ್ಥಾನಗಳು ಓಪನ್ ಆಗಿದ್ದು, ಎಂದಿನಂತೆ ಭಕ್ತರದಂಡು ದೇವಸ್ಥಾನಕ್ಕೆ ಆಗಮಿಸುತ್ತಿದೆ.
ಕಪಿಲೇಶ್ವರನ ದರ್ಶನಕ್ಕೆ ಭಕ್ತರ ದಂಡು ಬೆಳಗಾವಿಯ ಸುಪ್ರಸಿದ್ಧ ಕಪಿಲೇಶ್ವರ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರೋ ಹಿನ್ನೆಲೆ ದೇವಸ್ಥಾನದ ಆವರಣವನ್ನು ನೀರು ಸಿಂಪಡಿಸಿ ಶುಚಿಗೊಳಿಸಲಾಗುತ್ತಿದೆ. ಈ ಕಪಿಲೇಶ್ವರ ದೇವಸ್ಥಾನ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿದ್ದು, ಈಗಾಗಲೇ ಕಪಿಲೇಶ್ವರನಿಗೆ ರುದ್ರಾಭಿಷೇಕ ಮಾಡಲಾಗುತ್ತಿದೆ.
ಇನ್ನು ಜನರ ಸುರಕ್ಷತೆ ಹಿತದೃಷ್ಟಿಯಿಂದ ದೇವಸ್ಥಾನ ಪ್ರವೇಶಕ್ಕೂ ಮುನ್ನ ಭಕ್ತಾದಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತಿದ್ದು, ದೇವಸ್ಥಾನಕ್ಕೆ ತೆಂಗಿನಕಾಯಿ, ಕರ್ಪೂರ, ಬಿಲ್ವಪತ್ರೆ, ಹೂವು ತರದಂತೆ ಭಕ್ತರರಿಗೆ ಹೇಳಲಾಗುತ್ತಿದೆ. ಇದಲ್ಲದೇ ತೆಂಗಿನಕಾಯಿ, ಕರ್ಪೂರ, ಹೂವು ತಂದವರನ್ನು ದೇವಸ್ಥಾನದ ಭದ್ರತಾ ಸಿಬ್ಬಂದಿಗಳಿಂದ ವಾಪಸ್ ಕಳುಹಿಸು ಕ್ರಮಕೈಗೊಳ್ಳಲಾಗುತ್ತಿದೆ.
ಇನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ಕೆಲ ಸೂಚನೆಗಳನ್ನು ನೀಡಲಾಗಿದ್ದು, ಅವುಗಳು ಇಂತಿವೆ..
- ಮಾಸ್ಕ್ ಧರಿಸದೇ ಆಗಮಿಸುವ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ಇಲ್ಲ.
- ದೇವಸ್ಥಾನದ ಆವರಣದಲ್ಲಿ ಮೂರ್ತಿಗಳನ್ನು ಕೈ ಮುಟ್ಟಿ ನಮಸ್ಕರಿಸುವಂತಿಲ್ಲ.
- ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯಬೇಕು.
- ತೆಂಗಿನಕಾಯಿ, ಹೂವು, ಕರ್ಪೂರ ತರದೇ ದೇವಸ್ಥಾನ ಪ್ರವೇಶಿಸಲು, ಭಕ್ತರಿಗೆ ಶ್ರೀ ಕಪಿಲೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.