ಅಥಣಿ: ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಗಲಾಟೆ ನಡೆದು, ಕೆಲವು ಕಿಡಿಗೇಡಿಗಳು ನಾಲ್ವರ ಮೇಲೆ ಬ್ಲೇಡ್ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಚೇತನ ಹಡಪದ, ಪ್ರಸಾದ ಅಶೋಕ ಸಿಂದೂರೆ ಹಾಗು ವಿಕಾಸ ಸುಭಾಶ ಸುಣಗಾರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಹುಲ ಈರಪ್ಪ ಪಾಟೀಲ ಎಂಬ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಬೆಳಗಾವಿ ವಿಮ್ಸ್ಗೆ ರವಾನಿಸಲಾಗಿದೆ.