ಚಿಕ್ಕೋಡಿ: ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ.
ಚಿಕ್ಕೋಡಿ: ಕಲ್ಲೋಳ ಗ್ರಾಮದ ದತ್ತ ಮಂದಿರ ಮುಳುಗಡೆ
ಕೃಷ್ಙಾ ನದಿಗೆ ಹರಿದು ಬರುತ್ತಿರುವ ಒಳ ಹರಿವು 1.95 ಲಕ್ಷ ಕ್ಯೂಸೆಕ್ಗಿಂತ ಅಧಿಕ ಇದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳಿಂದ ಕೃಷ್ಙಾ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವೇದಗಂಗಾ, ಧೂದಗಂಗಾ ಹಾಗೂ ಕೃಷ್ಣಾ ನದಿ ನೀರಿನಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಕೃಷ್ಙಾ ನದಿಗೆ ಹರಿದು ಬರುತ್ತಿರುವ ಒಳಹರಿವು 1.95 ಲಕ್ಷ ಕ್ಯೂಸೆಕ್ಗಿಂತ ಅಧಿಕ ಇದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳಿಂದ ಕೃಷ್ಙಾ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಪ್ರಮಾಣ ಸ್ಥಿರವಾಗಿದ್ದು, 56,000 ಕ್ಯೂಸೆಕ್ ಪ್ರಮಾಣದ ನೀರು ಬಿಡುಗಡೆ ಮುಂದುವರೆದಿದೆ. ಹಾಗಾಗಿ ನದಿ ತೀರದ ಜನರು ಸ್ವಲ್ಪ ಮಟ್ಟಿಗೆ ಪ್ರವಾಹದ ಆತಂಕದಲ್ಲಿದ್ದಾರೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಲ್ಲಿ ವರುಣನ ಆರ್ಭಟ ತಗ್ಗಿದೆ.