ಚಿಕ್ಕೋಡಿ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಬಾಲಕರ ನಿಲಯ ಅಡುಗೆ ಸಹಾಯಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ.
ಕಾಗವಾಡ; ಸರ್ಕಾರಿ ವಸತಿ ನಿಲಯದ ಅಡುಗೆ ಸಹಾಯಕಿ ಆತ್ಮಹತ್ಯೆ - ಕಾಗವಾಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಕಾಗವಾಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡುಗೆ ಸಹಾಯಕಿ ತಾನು ವಾಸವಿದ್ದ ಕ್ವಾರ್ಟರ್ಸ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆ
ಗೋಕಾಕ ನಿವಾಸಿ ಲಕ್ಷ್ಮೀ ಕೆಂಪಣ್ಣಾ ಕುಲಗೋಡ (28) ಮೃತ ಮಹಿಳೆ. ಈಕೆ ತಾನು ವಾಸವಿದ್ದ ಕಾಗವಾಡದ ಕ್ವಾರ್ಟರ್ಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮೃತಳು 10 ದಿನಗಳ ಹಿಂದೆ ಅಥಣಿ ಸರ್ಕಾರಿ ವಸತಿ ನಿಲಯದಿಂದ ಡೆಪ್ಯುಟೇಶನ್ ಮೇಲೆ ಕಾಗವಾಡ ವಸತಿ ನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು. ವಿವಾಹ ವಿಚ್ಚೇದನವಾಗಿ ಒಬ್ಬಳೇ ವಸತಿ ನಿಲಯದಲ್ಲಿ ವಾಸಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಕಾಗವಾಡ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.