ಕರ್ನಾಟಕ

karnataka

ETV Bharat / state

ಬಿರು ಬಿಸಿಲಿನ ನಡುವೆ ಬಿಜೆಪಿ ಭರ್ಜರಿ ಪ್ರಚಾರ... 15 ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂಎ ಶೆಟ್ಟರ್​! - ಕಾಗವಾಡ ಬಿಜೆಪಿ ಮುಖಂಡರ ಉಪ ಚುನಾವಣೆ ಪ್ರಚಾರ ಸುದ್ದಿ

ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ತನ್ನ ಭರ್ಜರಿ ಪ್ರಚಾರ ನಡೆಸಿದ್ದು, ಐನಾಪೂರ ಗ್ರಾಮದಲ್ಲಿ ಸಚಿವ ಜಗದೀಶ್​​ ಶೆಟ್ಟರ್​, ವಿಧಾನಸಭಾ ಮುಖ್ಯ ಸಂಚೇತಕ ಮಾಂತೇಶ್​ ಕವಟಗಿಮಠ, ಸಚಿವ ಸಿ.ಸಿ.ಪಾಟೀಲ ಮತ್ತು ಜಿಲ್ಲಾ ಬಿಜೆಪಿ ನಾಯಕರ ಜೊತೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕೋರಿದರು.

kagawada-by-election-bjp-leader-campaign
ಬಿರು ಬಿಸಿಲಿನ ನಡುವೆ ಕಮಲ ನಾಯಕರ ಭರ್ಜರಿ ಪ್ರಚಾರ

By

Published : Nov 29, 2019, 11:11 PM IST

ಚಿಕ್ಕೋಡಿ : ಕಾಗವಾಡ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್​ ಪರ ಪ್ರಚಾರಕ್ಕಾಗಿ ಬಿಜೆಪಿ ಮುಖಂಡರು ಬಿಸಿಲನ್ನು ಲೆಕ್ಕೆಸದೆ ಪ್ರಚಾರ ನಡೆಸಿದರು.

ಕ್ಷೇತ್ರದ ಐನಾಪೂರ ಗ್ರಾಮದಲ್ಲಿ ಸಚಿವ ಜಗದೀಶ್​ ಶೆಟ್ಟರ್​, ವಿಧಾನಸಭಾ ಮುಖ್ಯ ಸಂಚೇತಕ ಮಾಂತೇಶ್​ ಕವಟಗಿಮಠ, ಸಚಿವ ಸಿ.ಸಿ.ಪಾಟೀಲ್​ ಮತ್ತು ಜಿಲ್ಲಾ ಬಿಜೆಪಿ ನಾಯಕರ ಜೊತೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. 15 ಕ್ಷೇತಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ, ಕಾಂಗ್ರೆಸ್‌ನವರು ನಿರಾಶರಾಗಿದ್ದಾರೆ. ಆತ್ಮವಿಶ್ವಾಸ ಕಳೆದುಕೊಂಡು ಬಹಳ ಕೀಳಮಟ್ಟದಲ್ಲಿ‌ ಮಾತಾಡಲು ಪ್ರಾರಂಭಿಸಿದ್ದಾರೆ ಎಂದು ಶೆಟ್ಟರ್ ಹೇಳಿದರು.

ಬಿರು ಬಿಸಿಲಿನ ನಡುವೆ ಕಮಲ ನಾಯಕರ ಭರ್ಜರಿ ಪ್ರಚಾರ

ಸಂವಿಧಾನದ ಬಗ್ಗೆ ಬುದ್ದಿ‌ ಹೇಳಲು ಹೊರಟಿದ್ದಾರೆ. ಮೊದಲು ಅವರು ಸಂವಿಧಾನ ಅರ್ಥ ಮಾಡಿಕೊಳ್ಳಬೇಕು. ಅನರ್ಹ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನ ಸಂಪೂರ್ಣ ಅಧ್ಯಯನ ಮಾಡ್ಲಿ, ಅವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ, ಸಿದ್ದರಾಮಯ್ಯ ಬಂದ್ರು ಅಥವಾ ಯಾರೇ ಬಂದ್ರು ಬಿಜೆಪಿ ಅಭ್ಯರ್ಥಿಗಳು ಬಹಳ ಅಂತರದಿಂದ ಗೆಲ್ತಾರೆ ಎಂದು ಭವಿಷ್ಯ ನುಡಿದರು.

ದೇವೆಗೌಡರು, ಕುಮಾರಸ್ವಾಮಿ ದಿನಕ್ಕೊಂದು ಮಾತಾಡ್ತಾರೆ, ಯಡಿಯೂರಪ್ಪ ಸರ್ಕಾರ ಬಿಳಲ್ಲ ಎನ್ನುವವರು, ಸದ್ಯ ಬಿಜೆಪಿ ಅಭ್ಯರ್ಥಿ ಸೋಲಿಸುವುದೇ ನನ್ನ ಗುರಿ ಅಂತಾರೆ, ದಿನಕ್ಕೊಂದು ಸ್ಟೇಟ್​ಮೆಂಟ್​ ಕೊಟ್ಟು ಕನ್ಪೂಷನ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಇಬ್ಬರೂ ಒಂದಾಗಿ ಇರ್ತಿವಿ, ಬಿಜೆಪಿ ಸರ್ಕಾರ ಹೋಗಿ ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತೆ ಅಂತಾರೆ, ಕುಮಾರಸ್ವಾಮಿ ಹೇಳ್ತಾರೆ ನಾನು ಮುಖ್ಯಮಂತ್ರಿ ಇದ್ದಾಗ ಕಾಂಗ್ರೆಸ್ ಕಾಟ ತಾಳಕ್ಕಾಗಿಲ್ಲ, ಒಂದು ದಿನ ಸರಿಯಾಗಿ ನಿದ್ದೆ ಮಾಡೊಕೆ ಕೊಡಲಿಲ್ಲ ಅಂತ ಹೇಳಿದ್ದಾರೆ. ಮತ್ತೆ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತಾಡ್ತಾರೆ, ಕಾಂಗ್ರೆಸ್‌ನವರು ಸೋಲ್ತಿವಿ ಅಂತ ನಿರಾಶೆಯಾಗಿದೆ, ಕಾರಣಗಳನ್ನ ಪಟ್ಟಿ ಮಾಡಿಕೊಂಡಿದ್ದಾರೆ, ಡಿ.9 ನಂತರ ಸೋಲಲು ಕಾರಣಗಳು, ಬಿಜೆಪಿ ಹಣ ಬಲ, ಮತ್ತೊಂದು ಹೀಗೆ ಪಟ್ಟಿ ಮಾಡಿ ಫೌಂಡೇಷನ್ ಹಾಕ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಹೈ ಕಮಾಂಡ್​ಗೆ ಸೋಲಿನ ಬಗ್ಗೆ ಹೇಳಿದ್ದಾರೆ, ಸೋಲಿಗೆ ನಾನು ಕಾರಣ ಅಲ್ಲ, ಬೇರೆ ನಾಯಕರು ಪ್ರಚಾರಕ್ಕೆ ಬರತಿಲ್ಲ, ಯಾರು ಅನರ್ಹರು ಅಂತ ಹೇಳ್ತಾರೆ ಅವರನ್ನು ಅರ್ಹರನ್ನಾಗಿ ಜನ ಮಾಡ್ತಾರೆ, ಜನರ ತೀರ್ಪು ಅಂತಿಮ, ಇಂಟರ್ನಲ್ ರಿಪೋರ್ಟ್ ಮತ್ತು ಬಹಿರಂಗ ರಿಪೋರ್ಟ್ ಒಂದೇ ಇದೆ. 15 ಸ್ಥಾನ ಬಿಜೆಪಿ ಗೆಲ್ಲುತ್ತದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು ಹೇಳಿದರು.

For All Latest Updates

TAGGED:

ABOUT THE AUTHOR

...view details