ಕರ್ನಾಟಕ

karnataka

ETV Bharat / state

ಉಪ ಚುನಾವಣೆ ರಣಾಂಗಣ : ಕಾಗವಾಡಕ್ಕೆ ಪ್ರಕಾಶ್​ ಹುಕ್ಕೇರಿ, ಅಥಣಿಗೆ ರಾಜು ಕಾಗೆಗೆ ಮಣೆ - ಕಾಗವಾಡ ಅಥಣಿ ಉಪಚುನಾವಣೆ ಸುದ್ದಿ

ಜಿದ್ದಾಜಿದ್ದಿನ ರಣ ಕಣವಾಗಿರುವ ಉಪ ಚುನಾವಣೆಗೆ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದು, ಬಿಜೆಪಿ ಕಾಗವಾಡದಿಂದ ಪ್ರಕಾಶ್ ಹುಕ್ಕೇರಿಯನ್ನು ಮತ್ತು ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ ಕಾಗವಾಡದ ಮಾಜಿ ಶಾಸಕ ರಾಜು ಕಾಗೆಯನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ವಿಧಾನಸಭಾ ಉಪ ಚುನಾವಣೆ

By

Published : Nov 15, 2019, 9:31 AM IST

ಚಿಕ್ಕೋಡಿ : ಕಳೆದ ವಿಧಾನಸಭಾ ಚುನಾವಣೆಯಿಂದಲ್ಲೂ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಈ ಉಪಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ತಾಲೂಕಿನಲ್ಲಿ ಕೇಳಿ ಬರುತ್ತಿವೆ.

ಆದರೆ ಅಥಣಿ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿರುವ ಕಾಂಗ್ರೆಸ್, ಕಾಗವಾಡದ ಮಾಜಿ ಶಾಸಕ ರಾಜು ಕಾಗೆಯನ್ನು ಅಥಣಿಯಿಂದ ಕಣಕ್ಕಿಳಿಸಲು ನಿರ್ಧರಿಸಿರುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ರಾಜು ಕಾಗೆ ಆಪ್ತರು ಹೇಳುವ ಪ್ರಕಾರ ಕಾಗೆಯವರು ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವ ಎಲ್ಲ ತಯಾರಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಆದರೆ, ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಉತ್ತಮ ನಾಯಕರಿಲ್ಲ, ಹೀಗಾಗಿ ರಾಜು ಕಾಗೆ ಅವರಿಗೆ ಅಥಣಿ ಟಿಕೆಟ್ ನೀಡಲು ಕೈ ಹೈಕಮಾಂಡ್​​ ನಿರ್ಧರಿಸಿದೆ ಎನ್ನಲಾಗಿದೆ. ಒಂದು ವೇಳೆ ಪ್ರಕಾಶ ಹುಕ್ಕೇರಿ ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ರಾಜು ಕಾಗೆ ಅಥಣಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು. ಅಲ್ಲದೆ ಹುಕ್ಕೇರಿ ಕಾಗವಾಡ ಮತಕ್ಷೇತ್ರದಿಂದ ಸ್ಪರ್ಧೆ ಮಾಡದಿದ್ದರೆ, ಕಾಗೆ ಕಾಗವಾಡದಿಂದ ಸ್ಪರ್ಧೆ ಮಾಡಬಹುದು ಎಂಬುದು ಕ್ಷೇತ್ರದ ರಾಜಕೀಯ ಪಂಡಿತರ ಲೆಕ್ಕಾಚಾರ.

ಒಟ್ಟಾರೆಯಾಗಿ ಜಿದ್ದಾಜಿದ್ದಿನ ರಣರಂಗವಾಗಿ ತಿರುವು ಪಡೆದುಕೊಂಡಿರುವ ಉಪ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡುತ್ತೆ ಅನ್ನೊದನ್ನ ಕಾಯ್ದು ನೋಡಬೇಕಿದೆ.

ABOUT THE AUTHOR

...view details