ಕರ್ನಾಟಕ

karnataka

ETV Bharat / state

ಕಾಂಕ್ರಿಟ್ ರಸ್ತೆಯಲ್ಲೇ ಭಯಾನಕ ಧೂಳು; ಗ್ರಾಮಸ್ಥರ‌ ನರಕಯಾತನೆ - etv bharat

ಬೆಳಗಾವಿ ತಾಲೂಕಿನ ಮತನಾಳ ಗ್ರಾಮದಲ್ಲಿ ನಿರ್ಮಿಸಿದ್ದ ಸಿಮೆಂಟ್​ ರಸ್ತೆ ಜನರಿಗೆ ಧೂಳಿನ ಸ್ನಾನ ಮಾಡಿಸುತ್ತಿದೆ. 2 ತಿಂಗಳ ಹಿಂದಷ್ಟೆ ನಿರ್ಮಾಣವಾದ ಈ ರಸ್ತೆ ಬಗ್ಗೆ ಈಗ ದೂರುಗಳು ಹೆಚ್ಚಾಗಿವೆ.

ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಸಿಮೆಂಟ್ ರಸ್ತೆ ದುರಸ್ತಿಗೊಳಿಸಲು ಆಗ್ರಹಿಸಿ ಪ್ರತಿಭಟನಾಕಾರರು ರಸ್ತೆ ಕೂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

By

Published : May 9, 2019, 5:57 PM IST

ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರಿಟ್​ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ.

ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಕಸ ಹೊಡೆದರೆ ಸಾಕು ಸಂಪೂರ್ಣ ಧೂಳುಮಯವಾಗುತ್ತಿದೆ. ಇನ್ನೂ ಭಾರಿ ವಾಹನಗಳ ಸಂಚಾರದಿಂದಾಗಿ ದಟ್ಟ ಹೊಗೆ ಆವರಿಸಿದಂತೆ ಧೂಳು ಮುತ್ತಿಕ್ಕಿಕೊಳ್ಳುತ್ತದೆ.

2 ತಿಂಗಳ ಹಿಂದಷ್ಟೇ ನಿರ್ಮಿಸಿದ ಸಿಮೆಂಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

ಗ್ರಾಮಸ್ಥರು ಪೊರಕೆ ಹಿಡಿದು ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ, ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details