ಕರ್ನಾಟಕ

karnataka

ETV Bharat / state

ಬ್ಲೈಂಡ್ ಆಗಿ ಯಾರನ್ನೂ ಮನೆ ಕೆಲಸಕ್ಕೆ ಸೇರಿಸಿಕೊಳ್ಳಬೇಡಿ: ದಾಂಪತ್ಯ ಕಲಹ ನಂತರ ಕೆ.ಕಲ್ಯಾಣ್​​​​ ಮನವಿ - Belagavi Police

ಪ್ರತಿ ಪೊಲೀಸರು ಶ್ರಮವಹಿಸಿ ಸಾಹಸ ಮಾಡಿ ಅಪರಾಧಿಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಜೀವನದಲ್ಲಿ ಮೂರನೆಯವರು ಬಂದು ಹೀಗೆಲ್ಲಾ ಆಗಿದೆ. ನಮ್ಮ ಕುಟುಂಬಸ್ಥರು ಈಗ ಸುರಕ್ಷಿತರಾಗಿದ್ದಾರೆ ಎಂದು ಕೆ.ಕಲ್ಯಾಣ್ ತಿಳಿಸಿದರು.

k-klayan-
ಚಿತ್ರ ಸಾಹಿತಿ ಕೆ.ಕಲ್ಯಾಣ್​​

By

Published : Oct 6, 2020, 7:27 PM IST

ಬೆಳಗಾವಿ:ವಂಚಕರ ಕಪಿಮುಷ್ಠಿಯಲ್ಲಿದ್ದ ಪತ್ನಿ, ಅತ್ತೆ, ಮಾವ ಕ್ಷೇಮವಾಗಿ ಮನೆ ಸೇರಿದ್ದಾರೆ. ನನ್ನ ಕುಟುಂಬದ ನೆರವಿಗೆ ನಿಂತ‌ ಮಹಾನಗರ ಪೊಲೀಸರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಚಿತ್ರ ಸಾಹಿತಿ ಕೆ.ಕಲ್ಯಾಣ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕೌಟುಂಬಿಕ ವಿಚಾರದಲ್ಲಿ ಆಕಸ್ಮಿಕವಾಗಿ ಬಂದ ಮೂರನೇ ವ್ಯಕ್ತಿಗಳಿಂದ ನಮಗೆ ತೊಂದರೆ ಆಗಿತ್ತು. ವಂಚಕರಿಗೆ ತಕ್ಕ ಶಿಕ್ಷೆ ಆಗಬೇಕು. ಈ ಬಗ್ಗೆ ನಾನು ಬೆಳಗಾವಿ ಪೊಲೀಸರ ಸಹಕಾರ ಕೋರಿದ್ದೆ. ನಮ್ಮವರು ಬಾಯ್ತಪ್ಪಿ ಹೇಳಿದ ಆರೋಪಗಳಿಗೆ ನಾನು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ಕೊಡಬೇಕಾಯಿತು ಎಂದರು.

ಚಿತ್ರ ಸಾಹಿತಿ ಕೆ.ಕಲ್ಯಾಣ್​​

ಈಗ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವ ಸಮಯ. ಪ್ರತಿ ಪೊಲೀಸರು ಶ್ರಮವಹಿಸಿ ಸಾಹಸ ಮಾಡಿ ಅಪರಾಧಿಗಳನ್ನು ಪತ್ತೆ ಹಚ್ಚಿದ್ದಾರೆ. ತಪ್ಪು‌ ಮಾಡಿದವರ ವಿರುದ್ಧ ಕಾನೂನು ಪ್ರಕಾರ ಏನು ನಡೀಬೇಕೋ ನಡೀತಿದೆ. ನನ್ನ ಪತ್ನಿ, ಅತ್ತೆ, ಮಾವರನ್ನು ಕ್ಷೇಮವಾಗಿ ಅವರ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ಸದ್ಯ ಮೂವರು ಅವರ ಸಂಬಂಧಿಕರ ಜೊತೆ ನೆಮ್ಮದಿಯಾಗಿ ಇದ್ದಾರೆ ಎಂದರು.

ಪ್ರಕರಣದ ಹಿಂದಿನ ಷಡ್ಯಂತ್ರ ಗಮನಿಸಿದಾಗ ಪತ್ನಿ, ಅತ್ತೆ, ಮಾವ ಜೀವಂತವಾಗಿ ಸಿಗಲು ಬೆಳಗಾವಿ ಪೊಲೀಸರ ಪರಿಶ್ರಮ ಕಾರಣ. ವಾಸ್ತವಾಂಶ ಜನರಿಗೆ ತಲುಪಿಸಿದ ಮಾಧ್ಯಮ ಸ್ನೇಹಿತರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ: ಪ್ರೇಮಕವಿ ದಾಂಪತ್ಯದಲ್ಲಿ ಹುಳಿ ಹಿಂಡಿದ ಆರೋಪ: ಮಂತ್ರವಾದಿ ಊದಿನಕಡ್ಡಿ ಶಿವಾನಂದ ಅರೆಸ್ಟ್

ದಯವಿಟ್ಟು ಅಪರಿಚಿತರನ್ನು ಮನೆಗೆ ಸೇರಿಸುವ ಮುನ್ನ ಪರಾಮರ್ಶಿಸಿ. ಬ್ಲೈಂಡ್ ಆಗಿ ಯಾರನ್ನೂ ಮನೆ ಕೆಲಸಕ್ಕೆ ಸೇರಿಸಿಕೊಳ್ಳಬೇಡಿ. ಅವರ ಪೂರ್ವಾಪರ ಅರಿತು ಮನೆಗೆ ಸೇರಿಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದರು.

ABOUT THE AUTHOR

...view details