ಕರ್ನಾಟಕ

karnataka

ETV Bharat / state

ಪ್ರೇಮಕವಿ ದಾಂಪತ್ಯದಲ್ಲಿ ಕಲಹ: ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋದ ಕೆ. ಕಲ್ಯಾಣ ಪತ್ನಿ - ಚಿತ್ರ ಸಾಹಿತಿ ಕೆ ಕಲ್ಯಾಣ್​​

ಚಿತ್ರಸಾಹಿತಿ ಕೆ. ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಕೌಟುಂಬಿಕ ಕಲಹ ಇದೀಗ ಬೆಳಗಾವಿಯ ಮಾಳಮಾರುತಿ ಠಾಣೆ ಮೆಟ್ಟಿಲೇರಿದೆ.

K Kalyan's wife Ashwini has lodged a police complaint against her husband
ಪ್ರೇಮಕವಿ ದಾಂಪತ್ಯದಲ್ಲಿ ಕಲಹ : ಠಾಣೆ ಮೆಟ್ಟಿಲೇರಿದ ಕೆ.ಕಲ್ಯಾಣ ಪತ್ನಿ

By

Published : Oct 3, 2020, 7:30 PM IST

Updated : Oct 3, 2020, 7:38 PM IST

ಬೆಳಗಾವಿ :ಚಂದನವನದ ಪ್ರೇಮಕವಿ, ಹೆಸರಾಂತ ಚಿತ್ರಸಾಹಿತಿ ಕೆ. ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಕೌಟುಂಬಿಕ ಕಲಹ ಇದೀಗ ಬೆಳಗಾವಿಯ ಮಾಳಮಾರುತಿ ಠಾಣೆ ಮೆಟ್ಟಿಲೇರಿದೆ. ಬೆಳಗಾವಿಯ ಅಶೋಕ ನಗರದಲ್ಲಿ ವಾಸವಾಗಿರುವ ಅಶ್ವಿನಿ ಸೆ. 30ರಂದು ಕಿಡ್ನಾಪ್ ಆಗಿದ್ದಾರೆಂದು ಮಾಳಮಾರುತಿ ಠಾಣೆಯಲ್ಲಿ ಕೆ. ಕಲ್ಯಾಣ ದೂರು ನೀಡಿದ್ದರು.

ಪ್ರೇಮಕವಿ ದಾಂಪತ್ಯದಲ್ಲಿ ಕಲಹ : ಠಾಣೆ ಮೆಟ್ಟಿಲೇರಿದ ಕೆ.ಕಲ್ಯಾಣ ಪತ್ನಿ
ಕೆ. ಕಲ್ಯಾಣ ದೂರಿನ ಮೇರೆಗೆ ಮಾಳಮಾರುತಿ ಠಾಣೆ ಪೊಲೀಸರು ಕಲ್ಯಾಣ ಪತ್ನಿ ಅಶ್ವಿನಿ ಅವರನ್ನು ಠಾಣೆಗೆ ಕರೆತಂದಿದ್ದಾರೆ.ಪ್ರಕರಣ ಕುರಿತು ಮಾಳಮಾರುತಿ ಠಾಣೆಯಲ್ಲಿ ಪೊಲೀಸರು ಅಶ್ವಿನಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ಆದರೆ ನಾನು ಅಪಹರಣ ಆಗಿಲ್ಲ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಅಶ್ವಿನಿ ಪರ ವಕೀಲ ಸತೀಶ್ ದಳವಾಯಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಶ್ವಿನಿ ಕಾಣೆಯಾಗಿಲ್ಲ. ಪೊಲೀಸರ ಸೂಚನೆ ಮೇರೆಗೆ ಅಶ್ವಿನಿ ಅವರು ಬೆಳಗಾವಿಯ ಮಾಳಮಾರುತಿ ಠಾಣೆಗೆ ಆಗಮಿಸಿದ್ದಾರೆ. ಪತಿಯಾಗಿ ಕೆ. ಕಲ್ಯಾಣ ಅವರು 14 ವರ್ಷಗಳಿಂದ ತಮ್ಮ ಜವಾಬ್ದಾರಿ ನಿಭಾಯಿಸಿಲ್ಲ. ಅಲ್ಲದೇ ಅಶ್ವಿನಿಗೆ ನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಿಂದ ರೋಸಿ ಹೋಗಿ ಜೂನ್ 26 ರಂದು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಜನರನ್ನು ದಾರಿ ತಪ್ಪಿಸಲು ಕೆ. ಕಲ್ಯಾಣ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.

Last Updated : Oct 3, 2020, 7:38 PM IST

ABOUT THE AUTHOR

...view details