ಅಥಣಿ : ಮಹಾತ್ಮಾ ಗಾಂಧಿಯವರಿಗೆ ಮಹಾತ್ಮ ಎಂಬ ಶೀರ್ಷಿಕೆ ನೀಡಲಾಗುವುದಕ್ಕಿಂತ ಮುಂಚೆಯೇ ಮಹಾತ್ಮಾ ಎಂಬ ಶೀರ್ಷಿಕೆ ಪಡೆದವರು ಸಾಮಾಜಿಕ ಸುಧಾರಕ ಮಹಾತ್ಮಜ್ಯೋತಿರಾವ ಗೋಂವಿದರಾವ್ ಫುಲೆ ಎಂದು ಶಿಕ್ಷಕ ಸಂತೋಷ ಬಡಕಂಬಿ ಅಭಿಪ್ರಾಯಪಟ್ಟರು.
ಗಜಾನನ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಜ್ಯೋತಿರಾವ ಗೋಂವಿದರಾವ್ ಫುಲೆಯವರ 129 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಫುಲೆ ಅವರು ಓರ್ವ ಚಿಂತಕ ಮತ್ತು ಬರಹಗಾರ. ಅವರ ಕೆಲಸ ಮುಖ್ಯವಾಗಿ ಅಸ್ಪೃಶ್ಯತೆ ಮತ್ತು ಜಾತಿವ್ಯವಸ್ಥೆ, ಮಹಿಳೆಯರ ವಿಮೋಚನೆ ಮತ್ತು ಸಬಲೀಕರಣದ ನಿರ್ಮೂಲನೆ, ಹಿಂದೂ ಕುಟುಂಬ ಜೀವನದ ಸುಧಾರಣೆ, ಭಾರತದ ಕೆಳಮಟ್ಟದ ಜಾತಿ ಜನರಿಗೆ ಅವರು "ದಲಿತ" ಪದವನ್ನು ಸೃಷ್ಟಿಸಿದವರು ಎಂದರು.
ಮೊದಲು ಮಹಾತ್ಮ ಶೀರ್ಷಿಕೆ ಪಡೆದವರು ಫುಲೆ : ಸಂತೋಷ ಬಡಕಂಬಿ - ಅಥಣಿಸುದ್ದಿ
ಅಥಣಿಯಲ್ಲಿ ಜ್ಯೋತಿಬಾ ಫುಲೆಯವರ 129 ನೇ ಪುಣ್ಯಸ್ಮರಣೆಯನ್ನು ಮಾಳಿ ಸಮಾಜದವರು ಅದ್ದೂರಿಯಾಗಿ ಆಚರಿಸಿದರು.
ಪುಲೆಯವರ 129 ನೇ ಪುಣ್ಯಸ್ಮರಣೆ ಆಷರಣೆ
ವಿಧವಾ ಪುನರ್ವಿವಾಹಕ್ಕಾಗಿ ಫುಲೆ ಕೆಲಸ ಮಾಡಿದರು. 1863ರಲ್ಲಿ, ಗರ್ಭಿಣಿ ಬ್ರಾಹ್ಮಣ ವಿಧವೆಯರಿಗೆ ಸುರಕ್ಷಿತ ಸ್ಥಳದಲ್ಲಿ ಜನ್ಮ ನೀಡುವಂತೆ ಮನೆಯನ್ನು ತೆರೆದರು. ಶಿಶುಹತ್ಯೆ ತಪ್ಪಿಸಲು ಅವರು ಅನಾಥಾಶ್ರಮವನ್ನು ತೆರೆಯುತ್ತಾರೆ. ಅವರು ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಕೆಳ ಜಾತಿಯ ಜನರಿಗೆ ತಮ್ಮ ಮನೆಯ ಬಾವಿಯನ್ನು ಬಳಸಲು ಅವಕಾಶ ನೀಡಿದ್ದರು ಎಂದರು.