ಬೆಳಗಾವಿ :ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗಗಳ ಸಮಸ್ಯೆ ಬಗ್ಗೆ ನಾಳೆ ನ.4ರಂದು ಕರ್ನಾಟಕ - ಮಹಾರಾಷ್ಟ್ರ ರಾಜ್ಯಪಾಲರ ಜಂಟಿ ಸಭೆ ನಡೆಯಲಿದೆ, ಸಭೆಯಲ್ಲಿ ಉಭಯ ರಾಜ್ಯಗಳ ರಾಜ್ಯಪಾಲರು ಭಾಗವಹಿಸಲಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ನಗರದ ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಳೆ ಬೆಳಗ್ಗೆ 11ಕ್ಕೆ ಕರ್ನಾಟಕ-ಮಹಾರಾಷ್ಟ್ರ ರಾಜ್ಯಪಾಲರ ಜಂಟಿ ಸಭೆ ನಡೆಯಲಿದೆ. ಸಭೆಯಲ್ಲಿ ಕರ್ನಾಟಕ ಗವರ್ನರ್ ಥಾವರಚೆಂದ್ ಗೆಹ್ಲೋಥ್, ಮಹಾರಾಷ್ಟ್ರ ಗವರ್ನರ್ ಭಗತ್‌ಸಿಂಗ್ ಕೋಶಾಯರಿ ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ಉಭಯ ರಾಜ್ಯಗಳ ರಾಜ್ಯಪಾಲರಿಂದ ಗಡಿ ಭಾಗಗಳ ಸಮಸ್ಯೆ ಬಗ್ಗೆ ಚರ್ಚೆ ನಡೆಯಲಿದೆ. ಇದರಲ್ಲಿ ಪ್ರಮುಖವಾಗಿ ನೀರಾವರಿ, ಮೂಲಸೌಕರ್ಯ ವೃದ್ಧಿ, ರಸ್ತೆಗಳ ಅಭಿವೃದ್ಧಿ ಸೇರಿ ನಾನಾ ವಿಷಯಗಳ ಬಗ್ಗೆ ರಾಜ್ಯಪಾಲರು ಚರ್ಚೆ ನಡೆಸಲಿದ್ದಾರೆ. ಇನ್ನೂ ಸಭೆಯಲ್ಲಿ ಕರ್ನಾಟಕದ ಬೆಳಗಾವಿ, ಬೀದರ್, ವಿಜಯಪುರ, ಕಾರವಾರದ ಡಿಸಿ, ಎಸ್ಪಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಮಹಾರಾಷ್ಟ್ರದ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಎಸ್ಪಿಗಳು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ರಾಜ್ಯಪಾಲರ ಸಭೆ ನಡೆಯುತ್ತಿದೆ. ಉಭಯ ರಾಜ್ಯಗಳ ಪ್ರವಾಸ ವಿವರ, ಸಭೆಯ ವೇಳಾಪಟ್ಟಿ ಲಭ್ಯವಾಗಿದೆ.
ಉಭಯ ರಾಜ್ಯಗಳ ಪ್ರವಾಸ ವಿವರ, ಸಭೆಯ ವೇಳಾಪಟ್ಟಿ ಇದನ್ನೂ ಓದಿ :ಮಂಗಳೂರಿನ ನೀರು ಮಾರ್ಗದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ತಡೆಗೆ ಅಗತ್ಯ ಕ್ರಮ ಎಂದ ಡಿಸಿ