ಬೆಳಗಾವಿ:ಜೆಡಿಎಸ್ ಜೊತೆ ಸರಿಯಾದ ಹೊಂದಾಣಿಕೆ ಆಗದ ಕಾರಣ ಮೈತ್ರಿ ನಮಗೆ ಒಂದು ಪಾಠವಾಗಿದೆ. ಸೋಲನ್ನು ಮರೆತು ಮುಂದಿನ ಚುನಾವಣೆಯಲ್ಲಿ ಹೋರಾಟ ಮಾಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿ ನಮಗೊಂದು ಪಾಠ : ಸತೀಶ್ ಜಾರಕಿಹೊಳಿ - KN_BGM_05_jarakiholi_asamadana_KA10009
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಜೆಡಿಎಸ್ ಜೊತೆ ಸರಿಯಾದ ಹೊಂದಾಣಿಕೆ ಆಗದ ಕಾರಣ ಮೈತ್ರಿ ನಮಗೆ ಒಂದು ಪಾಠವಾಗಿದೆ. ಸೋಲನ್ನು ಮರೆತು ಮುಂದಿನ ಚುನಾವಣೆಯಲ್ಲಿ ಹೋರಾಟ ಮಾಡೋಣ ಎಂದಿದ್ದಾರೆ.
ಜೆಡಿಎಸ್ ಜೊತೆ ಸೇರಿದ್ದು ನಮಗೆ ಒಂದು ಪಾಠ : ಸತೀಶ್ ಜಾರಕಿಹೊಳಿ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಮೈತ್ರಿಯಿಂದ ನಾವು ಕಳೆದುಕೊಂಡಿದ್ದೇ ಜಾಸ್ತಿ ಎಂದು ಹೇಳುವ ಮುಖಾಂತರ ತಮ್ಮ ಅಸಮಾಧಾನ ಹೊರಹಾಕಿದರು.
ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿರುವ ಪರಿಣಾಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಲು ಈ ಸಭೆಯನ್ನ ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತಾನಾಡಿದ ಜಾರಕಿಹೊಳಿ, ಹಿಂದಿನ ಸೋಲಿನಲ್ಲಿ ನಮ್ಮಲ್ಲಿ ಹಲವಾರು ತಪ್ಪುಗಳಿದ್ದು, ಅವುಗಳನ್ನು ತಿದ್ದಿಕೊಂಡು ಮುಂದಿನ ಚುನಾವಣೆಯಲ್ಲಿ ಹೋರಾಟ ಮಾಡೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.