ಚಿಕ್ಕೋಡಿ :ನೆರೆ ಸಂತ್ರಸ್ತರ ನೆರವಿಗೆ ಬೆಳಗಾವಿ ಮತ್ತು ಗೋಕಾಕದಲ್ಲಿರುವ ರಿಲಾಯನ್ಸ್ ಫೌಂಡೇಷನ್ ಮತ್ತು ರಿಲಯನ್ಸ್ ಜಿಯೊ ಮೊಬೈಲ್ ಕಂಪನಿಯವರು ಪ್ರವಾಹದ ಸೆಳೆತಕ್ಕೆ ಸಿಲುಕಿ ಹಾನಿಗೊಳಗಾದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಪ್ರವಾಹ ಸಂತ್ರಸ್ಥರಿಗೆ ಕಿಟ್ ವಿತರಿಸಿದರು.
ನೆರೆ ಸಂತ್ರಸ್ಥರ ನೆರವಿಗೆ ದಾವಿಸಿದ ಜಿಯೋ ಕಂಪನಿ - Flood victims
ಕಳೆದ ತಿಂಗಳು ಸಂಭವಿಸಿದ ಕೃಷ್ಣಾ ನದಿ ಪ್ರವಾಹದಿಂದ ಮನೆಮಠ ಕಳೆದುಕೊಂಡಿರುವ ನಿರಾಶ್ರಿತರನ್ನು ಭೇಟಿ ಮಾಡಿ ಅವರಿಗೆ ಜಿಯೋ ಕಂಪನಿಯವರು ದಿನಗಳ ಬಳಕೆಯ ವಸ್ತುಗಳ ಕಿಟ್ ವಿತರಿಸಿ ಸಾಂತ್ವಾನ ಹೇಳಿದ್ದಾರೆ
ಜಿಯೊ
ಕೊಣ್ಣೂರು ಗ್ರಾಮದ ಸಂಕಷ್ಟಿನಲ್ಲಿರುವ ಸುಮಾರು ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿವೆ. ಅಂತಹ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಜಿಯೋ ಕಂಪನಿ ಮುಂದಾಗಿದೆ.
ಗೋಕಾಕದಿಂದ ಆಗಮಿಸಿರುವ ರಿಲಯನ್ಸ್ ಕಂಪನಿಯವರು ಸಂತ್ರಸ್ಥರ ಮನೆ ಮನೆಗೆ ತೆರಳಿ ಪರಿಹಾರ ಕಿಟ್ ವಿತರಿಸಿ ಸಾಂತ್ವನ ಹೇಳಿ ದಿನ ಬಳಕೆಯ ಸಾಮಗ್ರಗಳನ್ನು ನೀಡಿ ಸಾಂತ್ವನ ಜೊತೆಗೆ ದೈರ್ಯದಿಂದರಲೂ ಹೇಳಿದರು.