ಕರ್ನಾಟಕ

karnataka

By

Published : Dec 17, 2021, 10:23 AM IST

ETV Bharat / state

ಮಾರ್ಚ್ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ : ಜಯಮೃತ್ಯುಂಜಯ ಸ್ವಾಮೀಜಿ

ನಾವೆಲ್ಲರೂ ಕೂಡಿ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಮಾಡಿದ್ದೇವೆ. ಮಾರ್ಚ್‌ ತಿಂಗಳ ಒಳಗಾಗಿ ಈ ಸಮಾಜಕ್ಕೆ ಮೀಸಲಾತಿ ಕೊಡಬೇಕು ಅಂತಾ ಗಡುವು ನೀಡಿದ್ದೇವೆ. ಸಿಎಂ ಅಷ್ಟೊರೊಳಗಾಗಿ ಮೀಸಲಾತಿ ಕೊಡುತ್ತೇನೆ ಅಂದಿದ್ದಾರೆ. ಪಾದಯಾತ್ರೆ ಆರಂಭವಾಗಿ ಒಂದು ವರ್ಷ ಆಗಲಿದೆ. ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮ ಮಾಡಲಾಗುತ್ತದೆ. ಜನವರಿ 22ರಂದು ಕಾರ್ಯಕ್ರಮ ಮಾಡಿ ಸಿಎಂ ಅವರಿಂದ ರಾಷ್ಟ್ರೀಯ ಬಸವ ಕೃಷಿಕ ಪ್ರಶಸ್ತಿ ಕೊಡಿಸಲಾಗುತ್ತದೆ..

Jayamruthyunjaya Swamiji
ಜಯಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಮಾರ್ಚ್ ತಿಂಗಳ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಕೊಟ್ಟಿದ್ದಾರೆ ಎಂದು ಕೂಡಲಸಂಗಮ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬೆಳಗಾವಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಮನೆವರೆಗೂ ಹೋಗುತ್ತಿದ್ದೆವು. ಆದ್ರೆ, ಇಂದು ನಾವು ಕರೆದ ಸಭೆಗೆ ಸಿಎಂ ಬಂದು ನಮ್ಮ ಹೋರಾಟಕ್ಕೆ ಶೀಘ್ರವಾಗಿ ನ್ಯಾಯ ಕೊಡುವ ಭರವಸೆ ನೀಡಿದ್ದಾರೆ.

ಪಂಚಮಸಾಲಿಗೆ ಆದಷ್ಟು ಶೀಘ್ರದಲ್ಲಿ ಮೀಸಲಾತಿ ಕೊಡುತ್ತೇವೆ, ನಮ್ಮ ಮೇಲೆ ನಂಬಿಕೆ ಇಡಿ ಎಂದಿದ್ದಾರೆ. ಸಿಎಂ ಮಾತು ನಮ್ಮ ಹೋರಾಟಕ್ಕೆ ಶೇ.75ರಷ್ಟು ಯಶಸ್ಸು ತಂದುಕೊಟ್ಟಿದೆ ಎಂದರು.

ನಾವೆಲ್ಲರೂ ಕೂಡಿ ಮುಖ್ಯಮಂತ್ರಿಗೆ ಹಕ್ಕೊತ್ತಾಯ ಮಾಡಿದ್ದೇವೆ. ಮಾರ್ಚ್‌ ತಿಂಗಳ ಒಳಗಾಗಿ ಈ ಸಮಾಜಕ್ಕೆ ಮೀಸಲಾತಿ ಕೊಡಬೇಕು ಅಂತಾ ಗಡುವು ನೀಡಿದ್ದೇವೆ. ಸಿಎಂ ಅಷ್ಟೊರೊಳಗಾಗಿ ಮೀಸಲಾತಿ ಕೊಡುತ್ತೇನೆ ಅಂದಿದ್ದಾರೆ. ಪಾದಯಾತ್ರೆ ಆರಂಭವಾಗಿ ಒಂದು ವರ್ಷ ಆಗಲಿದೆ.

ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮ ಮಾಡಲಾಗುತ್ತದೆ. ಜನವರಿ 22ರಂದು ಕಾರ್ಯಕ್ರಮ ಮಾಡಿ ಸಿಎಂ ಅವರಿಂದ ರಾಷ್ಟ್ರೀಯ ಬಸವ ಕೃಷಿಕ ಪ್ರಶಸ್ತಿ ಕೊಡಿಸಲಾಗುತ್ತದೆ ಎಂದು ತಿಳಿಸಿದರು.

ಪಾದಯಾತ್ರೆಯಿಂದ ಸರ್ಕಾರಕ್ಕೆ ಬಿಸಿ ಮುಟ್ಟಿದೆ. ಹೀಗಾಗಿ, ಸರ್ಕಾರ ಸ್ಪಂದಿಸುವ ಕೆಲಸ ಮಾಡುತ್ತಿದೆ. ನಾವು ಸುಮ್ಮನೆ ಕೂರುವುದಿಲ್ಲ, ಗ್ರಾಮ ಮಟ್ಟದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತೇವೆ. ಸಿಎಂ ಅವರು ಮೂರು ತಿಂಗಳ ಸಮಯ ತೆಗೆದುಕೊಂಡಿದ್ದರು.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಿಂದುಳಿದ ವರ್ಗಗಳಿಂದ ವರದಿ ತಡವಾಗಿದೆ. ಸಮಾಜದ ಕೆಲಸಕ್ಕಾಗಿ ಎಲ್ಲಾ ಮುಖಂಡರಿಗೂ ಮನವಿ ಮಾಡಿಕೊಂಡಿದ್ದೆವು. ಸಿಎಂ ಬಸವರಾಜ ಬೊಮ್ಮಾಯಿ ಮೊದಲಿನಿಂದಲೂ ನಮಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದರು.

ABOUT THE AUTHOR

...view details