ಅಥಣಿ :ಸಾರಿಗೆ ನೌಕರರನ್ನು ರಾಜ್ಯ ನೌಕರರನ್ನಾಗಿ ಘೋಷಿಸುವಂತೆ ಕೂಡಲಸಂಗಮ ಪಂಚಮಸಾಲಿ ಪೀಠ ಸರ್ಕಾರಕ್ಕೆ ಮೊದಲೇ ಒತ್ತಾಯ ಮಾಡಿತ್ತು. ಈಗಲಾದರೂ ಸರ್ಕಾರ ನೌಕರರ ಬೇಡಿಕೆಯನ್ನು ತ್ವರಿತಗತಿಯಲ್ಲಿ ಈಡೇರಿಸಬೇಕೆಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಸಹಕರಿಸಿದ ಪಂಚಮಸಾಲಿ ಬಂಧು-ಬಾಂಧವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀಗಳು ಮಾತನಾಡಿ, ಕಳೆದ ಮೂರು ತಿಂಗಳಿನ ಹಿಂದೆ ಸಾರಿಗೆ ನೌಕರರಿಗೆ 6ನೇ ವೇತನ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಇದೀಗ ಸರ್ಕಾರ ಎಲ್ಲೋ ಒಂದು ಕಡೆ ಹಿಂದೇಟು ಹಾಕುತ್ತಿದೆ. ಸರ್ಕಾರ ಅವರ ಬೇಡಿಕೆಗೆ ಕೂಡಲೇ ದಿಟ್ಟ ಹೆಜ್ಜೆ ಇಡಬೇಕು. ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರ ಅವಧಿಯಲ್ಲಿ ಆಗುವಂತಹ ಕೆಲಸಕ್ಕೆ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.