ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ‌ ಬ್ರದರ್ಸ್‌ಗೆ ಒಲಿಯಲಿಲ್ಲ ಮಂತ್ರಿಸ್ಥಾನ - ಸಂಪುಟ ಸುದ್ದಿ

ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬಸ್ಥರಿಗೆ ಮಂತ್ರಿಗಿರಿ ಕೈತಪ್ಪಿದೆ. ಯಡಿಯೂರಪ್ಪ ಸರ್ಕಾರವಿದ್ದಾಗ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಬದಲಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸ್ಥಾನ ನೀಡಲಾಗುವುದು ಎನ್ನಲಾಗಿತ್ತು. ಆದರೆ ಅವರಿಗೂ ಸ್ಥಾನ ಕೈತಪ್ಪಿದೆ.

jarkiholi-brothers-
ಜಾರಕಿಹೊಳಿ‌ ಬ್ರದರ್ಸ್‌ಗೆ

By

Published : Aug 4, 2021, 2:38 PM IST

Updated : Aug 4, 2021, 3:00 PM IST

ಬೆಳಗಾವಿ:ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ‌ ಬ್ರದರ್ಸ್‌ಗೆ ಅವಕಾಶ ಕೈತಪ್ಪಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ‌ ಬಿಎಸ್‌ವೈ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. ಬಳಿಕ ಸಿಡಿ ಪ್ರಕರಣದಲ್ಲಿ ಸಿಲುಕಿ ರಮೇಶ್ ರಾಜೀನಾಮೆ ಸಲ್ಲಿಸಿ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.

ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ರಮೇಶ್ ಬದಲಿಗೆ ಅವರ ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಸಂಪುಟ ಸೇರಲಿದ್ದಾರೆ ಎನ್ನಲಾಗುತ್ತಿತ್ತು. ಆದರೀಗ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಜಾರಕಿಹೊಳಿ‌ ಬ್ರದರ್ಸ್‌ಗೆ ಅವಕಾಶ ನಿರಾಕರಿಸಲಾಗಿದೆ. ಮತ್ತೊಂದೆಡೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಸಚಿವರಾಗುವ ಒಲವು ತೋರಿಲ್ಲ.

ಮಂತ್ರಿ ಮಾಡೋದಾದ್ರೆ ಸಹೋದರ ರಮೇಶ್ ಜಾರಕಿಹೊಳಿರನ್ನೇ ಮಾಡಿ. ಕಾನೂನು ತೊಡಕು ನಿವಾರಣೆಯಾದ ಬಳಿಕ ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ನೀಡಿ ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಓದಿ:ಪಕ್ಷ ನನಗೆ ತಾಯಿ ಸಮಾನ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ: ರೇಣುಕಾಚಾರ್ಯ

Last Updated : Aug 4, 2021, 3:00 PM IST

ABOUT THE AUTHOR

...view details