ಕರ್ನಾಟಕ

karnataka

ETV Bharat / state

ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟು ಹೋಗುವ ಯೋಚನೆ ಮಾಡಲ್ಲ : ಸಚಿವ ಶ್ರೀರಾಮುಲು - ಈಟಿವಿ ಭಾರತ ಕನ್ನಡ

ಜನಾರ್ದನ ರೆಡ್ಡಿ ಪಕ್ಷದಲ್ಲಿ ಸಕ್ರಿಯವಾಗಿರುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಹಿರಿಯರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಜನಾರ್ದನ ರೆಡ್ಡಿ ಯಾವತ್ತೂ ಬಿಜೆಪಿ ಬಿಟ್ಟು ಹೋಗುವುದಾಗಿ ಹೇಳಿಲ್ಲ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

janardhan-reddy-wont-leave-bjp-says-minister-sriramulu
ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟು ಹೋಗುವ ಯೋಚನೆ ಮಾಡಲ್ಲ : ಸಚಿವ ಶ್ರೀರಾಮುಲು

By

Published : Dec 20, 2022, 9:04 PM IST

Updated : Dec 20, 2022, 9:22 PM IST

ಜನಾರ್ದನ ರೆಡ್ಡಿ ಬಿಜೆಪಿ ಬಿಟ್ಟು ಹೋಗುವ ಯೋಚನೆ ಮಾಡಲ್ಲ : ಸಚಿವ ಶ್ರೀರಾಮುಲು

ಬೆಳಗಾವಿ :ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಾರ್ದನ ರೆಡ್ಡಿ ಪ್ರಭಾವಿ ನಾಯಕರು. ಅವರು ಯಾವತ್ತೂ ಬಿಜೆಪಿ ಬಿಟ್ಟು ದೂರ ಹೋಗುವ ಯೋಚನೆ ಮಾಡುವುದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬಸ್ತವಾಡದಲ್ಲಿ ಹಲವು ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಪಕ್ಷದಲ್ಲಿ ಸಕ್ರಿಯವಾಗಿರುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಹಿರಿಯರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಅಲ್ಲದೆ ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಯಾವತ್ತೂ ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸದ್ಯ ಪಕ್ಷದಲ್ಲಿ ಸಕ್ರಿಯವಾಗುವ ನಿಟ್ಟಿನಲ್ಲಿ ಜನರ ಜೊತೆ ಇದ್ದಾರೆ. ನಾವು ಸ್ನೇಹ ಮತ್ತು ರಾಜಕೀಯವನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಪಕ್ಷ ಕಟ್ಟುವ ಬಗ್ಗೆಯೂ ಯಾವತ್ತೂ ಅವರು ಮಾತನಾಡಿಲ್ಲ ಎಂದು ಹೇಳಿದರು.

ಮರಾಠ ಸಮುದಾಯದ ಪ್ರತಿಭಟನೆ:ಮರಾಠ ಸಮುದಾಯವು 3ಎ ಯಿಂದ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಮನವಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುವುದು ಎಂದರು.

ಸಾರಿಗೆ ಇಲಾಖೆ ನೌಕರರ ಪ್ರತಿಭಟನೆ : ಸಾರಿಗೆ ಇಲಾಖೆಯ ನೌಕರರು ವಿವಿಧ ಬೇಡಿಕೆ ಆಗ್ರಹಿಸಿ ಮುಷ್ಕರ ನಡೆಸಿದ ಸಮಯದಲ್ಲಿ ಹಲವು ನೌಕರರು ವಜಾಗೊಂಡಿದ್ದರು. ನಾಲ್ಕು ನಿಗಮದಲ್ಲಿ ಸರಿ ಸುಮಾರು 2500 ಮಂದಿಯನ್ನು ವಜಾಗೊಳಿಸಲಾಗಿದೆ. ಇವರನ್ನು ಯಾವುದೇ ಪರಿಸ್ಥಿತಿಯಲ್ಲಿ ಮರಳಿ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಾನು ಆದೇಶ ಮಾಡುತ್ತೇನೆ ಎಂದು ಹೇಳಿದರು.

ಇನ್ನು, ಸಾರಿಗೆ ಇಲಾಖೆಗೆ ಏಳನೇ ವೇತನ ಆಯೋಗ ರಚನೆ ಮಾಡುವಂತೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಕೆಲಸ ಆಗುವಂತೆ ಮಾಡುತ್ತೇನೆ ಎಂದರು.

ನೇಕಾರರ ವಿವಿಧ ಬೇಡಿಕೆ ವಿಚಾರ : ನೇಕಾರರು ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಈಗಾಗಲೇ ನಮ್ಮ ಸರ್ಕಾರ 43 ಸಾವಿರ ನೇಕಾರರಿಗೆ 5000 ಸಹಾಯಧನ ನೀಡಿದೆ. ಬಿಜೆಪಿ ಸರ್ಕಾರದ ಹಲವು ಮುಖ್ಯಮಂತ್ರಿಗಳು ಈ ಹಿಂದೆ ನೇಕಾರರ ಸಾಲ ಮನ್ನಾ ಮಾಡಲಾಗಿದೆ. ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸದ್ಯ ಪ್ರತಿಭಟನೆ ಮಾಡುತ್ತಿದ್ದಾರೆ. ನೇಕಾರರನ್ನು ಬಿಟ್ಟು ನಮ್ಮ ಸರ್ಕಾರ ಇಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ :ಗಡಿ ವಿವಾದ.. ಅಮಿತ್ ಶಾ ಕರೆದ ಸಭೆಗೆ ಸಿಎಂ ಹೋಗಬಾರದಿತ್ತು: ಸಿದ್ದರಾಮಯ್ಯ ಅಸಮಾಧಾನ

Last Updated : Dec 20, 2022, 9:22 PM IST

ABOUT THE AUTHOR

...view details