ಕರ್ನಾಟಕ

karnataka

ETV Bharat / state

ಲಕ್ಷ್ಮಣ್ ಸವದಿ ಬಂದ್ರೆ ಕಾಂಗ್ರೆಸ್‌ಗೆ ಒಳ್ಳೆಯದು: ರಾಜು ಕಾಗೆ

ನನ್ನ ವೈಯಕ್ತಿಕ ಅಭಿಪ್ರಾಯ ಹೇಳಲು ಲಕ್ಷ್ಮಣ್ ಸವದಿ ಅವರ ನಿವಾಸಕ್ಕೆ ಬಂದಿದ್ದೇನೆ ಎಂದು ರಾಜು ಕಾಗೆ ತಿಳಿಸಿದರು.

Former MLA Raju Kage
ಮಾಜಿ ಶಾಸಕ ರಾಜು ಕಾಗೆ

By

Published : Apr 12, 2023, 8:24 PM IST

'ನನಗೆ ಸಚಿವ ಸ್ಥಾನ ಕೊಟ್ಟರೆ, ಸವದಿಗೆ ತ್ಯಾಗ ಮಾಡಲು ಸಿದ್ದ'

ಚಿಕ್ಕೋಡಿ (ಬೆಳಗಾವಿ) : ಅಥಣಿ ಬಿಜೆಪಿ ಟಿಕೆಟ್ ವಿಚಾರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದು, ಇದರ ಉಪಯೋಗ ಪಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಇಂದು ಕಾಗವಾಡ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ, ಸವದಿ ನಿವಾಸಕ್ಕೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಮಾತುಕತೆ ನಡೆಸಿದರು.

ಇದನ್ನೂ ಓದಿ :ರಾಣೆಬೆನ್ನೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್​ ಘೋಷಣೆ:​ ಎಂಎಲ್​ಸಿ ಸ್ಥಾನಕ್ಕೆ‌ ಆರ್​ ಶಂಕರ್ ರಾಜೀನಾಮೆ

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜು ಕಾಗೆ, ಚಿಕ್ಕೋಡಿಯಲ್ಲಿ ನಾನು ಮತ್ತು ಲಕ್ಷ್ಮಣ್ ಸವದಿ ಒಳ್ಳೆಯ ಗೆಳೆಯರು. ಟಿಕೆಟ್ ಸಿಗದೆ ಬೇಸರಗೊಂಡಿರುವುದಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ. ನಾವು ಇಬ್ಬರೂ ಒಗ್ಗಟ್ಟಾಗಿ ಹೋದರೆ ತಾಲೂಕಿನಲ್ಲಿ ಒಳ್ಳೆಯದಾಗುತ್ತದೆ ಎಂಬ ಭಾವನೆಯನ್ನು ಅವರ ಮುಂದೆ ವ್ಯಕ್ತಪಡಿಸಿದ್ದೇನೆ. ನಾನು ಕೂಡಾ ಕ್ಷೇತ್ರದಲ್ಲಿ ಒಂಟಿಯಾಗಿದ್ದೇನೆ. ಸವದಿ ಅವರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ :ಆತುರದ ನಿರ್ಧಾರ ಬೇಡ.. ಪಕ್ಷದಲ್ಲಿ ಉನ್ನತ ಭವಿಷ್ಯವಿದೆ: ಸವದಿಗೆ ಸಿಎಂ ಕಿವಿ ಮಾತು

ನನ್ನನ್ನು ರಾಜ್ಯ ನಾಯಕರು ಲಕ್ಷ್ಮಣ್​ ಸವದಿ ಅವರ ಮನೆಗೆ ಕಳಿಸಿಲ್ಲ. ವೈಯಕ್ತಿಕ ಅಭಿಪ್ರಾಯ ಹೇಳಲು ಅವರ ನಿವಾಸಕ್ಕೆ ಬಂದಿದ್ದೇನೆ. ಸವದಿ ಕಾಂಗ್ರೆಸ್ ಬಂದರೆ ಒಳ್ಳೆಯ ಸ್ಥಾನಮಾನವನ್ನು ಕೊಡುತ್ತೇವೆ. ನನಗೆ ಏನಾದರೂ ಸಚಿವ ಸ್ಥಾನ ಕೊಟ್ಟರೆ, ನಾನು ಸವದಿಗೆ ತ್ಯಾಗ ಮಾಡಲು ಸಿದ್ದ ಎಂದು ರಾಜು ಕಾಗೆ ತಿಳಿಸಿದರು.

ರಾಜೀನಾಮೆ ಬಗ್ಗೆ ನಾಳೆ ನಿರ್ಧಾರ:ಇಂದು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸವದಿ, ಬಿಜೆಪಿ ವರಿಷ್ಠರು ಕೊನೆ ಹಂತದಲ್ಲಿ ಟಿಕೆಟ್ ತಪ್ಪಿಸಿದ್ದು ನೋವಾಗಿದೆ. ಇದರಿಂದಾಗಿ ನಾಳೆ ಕಾರ್ಯಕರ್ತರ ಸಭೆ ಕರೆದು ಒಂದು ತೀರ್ಮಾನಕ್ಕೆ ಬರುತ್ತಿದ್ದೇನೆ. ಅಭಿಮಾನಿಗಳು ಕೂಡಾ ವಿಧಾನಪರಿಷತ್ ಸದಸ್ಯ ಸ್ಥಾನ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೆ. ನಾಳೆ ಸಾಯಂಕಾಲ ನನ್ನ ಅಥಣಿ ಹೈಕಮಾಂಡ್ ಮುಂದೆ ನಿಲ್ಲುವೆ, ಅವರು ಏನು ಹೇಳುತ್ತಾರೋ ಅದಕ್ಕೆ ಬದ್ದ ಎಂದರು.

ಇದನ್ನೂ ಓದಿ :ಕೈ ತಪ್ಪಿದ ಬಿಜೆಪಿ ಟಿಕೆಟ್ - ರಾಜೀನಾಮೆಗೆ ಸವದಿ ನಿರ್ಧಾರ.. ನಾಳೆಯೇ ಅಂತಿಮ ತೀರ್ಮಾನ

ABOUT THE AUTHOR

...view details