ಬೆಳಗಾವಿ:ಜಿಲ್ಲೆಯ ಆಭರಣ ಮಳಿಗೆಗಳ ಮಾಲೀಕರಿಗೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ನಗರದ ವಿವಿಧೆಡೆ ಆಭರಣ ಅಂಗಡಿ ಮಾಲೀಕರ ಮನೆ ಹಾಗೂ ಮಳಿಗೆಗಳ ಮೇಲೆ ಐಟಿ ದಾಳಿ ನಡೆದಿದೆ.
ನಗರದ ಖಡೇಬಜಾರ್ ನಲ್ಲಿರುವ ಪ್ರತಿಷ್ಠಿತ ಪೋತದಾರ್ ಜ್ಯುವೆಲ್ಲರ್ಸ್ ಮೇಲೆ ದಾಳಿ ಮಾಡಲಾಗಿದೆ. ಜಾಧವ್ ನಗರದಲ್ಲಿರುವ ಪೋತದಾರ್ ಜ್ಯುವೆಲ್ಲರ್ಸ್ ಮಾಲೀಕ ಅನಿಲ್ ಪೋತದಾರ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಜಿಲ್ಲೆಯ ಗೋಕಾಕ್ ನಗರದ ಎರಡು ಆಭರಣ ಮಳಿಗೆ ಸೇರಿ ಮಾಲೀಕನ ಮನೆ ಮೇಲೂ ದಾಳಿ ನಡೆಸಲಾಗಿದೆ. ಇಲ್ಲಿನ ಬಸವ ನಗರದಲ್ಲಿರುವ ಬಾಪಣಾ ಜ್ಯುವೆಲ್ಲರಿ ಶಾಪ್ ಮೇಲೂ ದಾಳಿ ನಡೆಸಲಾಗಿದೆ. ಪೂಣರ್ವಿ ಜ್ಯುವೆಲ್ಲರಿ ಹಾಗೂ ಅದರ ಮಾಲೀಕರಾದ ವಿಜಯ್ ಬಾಪಣಾ ಮತ್ತು ಪುರುಷೋತ್ತಮ ಬಾಪಣಾ ಮನೆ ಮತ್ತು ಅಂಗಡಿ ಮೇಲೆ ದಾಳಿ ನಡೆಸಲಾಗಿದೆ.
ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.