ಕರ್ನಾಟಕ

karnataka

ETV Bharat / state

ಗೋಕಾಕ್ ನಗರಸಭೆಯಲ್ಲಿ ಅವ್ಯವಹಾರ ಆರೋಪ.. ತನಿಖೆಗೆ ಬಿಜೆಪಿ ಮುಖಂಡರ ಒತ್ತಾಯ - lakhan jarkiholi

ಇತ್ತೀಚಿನ ದಿನಗಳಲ್ಲಿ ಅನರ್ಹ ಶಾಸಕ ರಮೇಶ್​​ ಜಾರಕಿಹೊಳಿ, ಲಖನ್​ ಚಾರಕಿಹೊಳಿ ಮತ್ತು ನಗರಸಭೆಯ 4 ನಾಲ್ಕು ಜನ ಸದಸ್ಯರು ಸೇರಿ ನಗರಸಭೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು​ ಆರೋಪಿಸಿದ್ದಾರೆ.

ಬಿಜೆಪಿ ಮುಖಂಡ ಅಶೋಕ್​ ಪೂಜಾರಿ

By

Published : Sep 30, 2019, 6:24 PM IST

ಗೋಕಾಕ : ಕಳೆದ 20 ವಷ೯ಗಳಿಂದ ಗೋಕಾಕ್ ನಗರಸಭೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ತಮ್ಮ ಲಖನ್ ಜಾರಕಿಹೊಳಿ ಹಿಡಿತದಲ್ಲಿದ್ದು, ಈ ಇಬ್ಬರು ಮುಖಂಡರ ಅಪ್ಪಣೆ ಇಲ್ಲದೇ ಏನೂ ನಡೆಯುತ್ತಿರಲಿಲ್ಲ ಎಂದು ಎಂದು ಬಿಜೆಪಿ ಮುಖಂಡ ಅಶೋಕ್​ ಪೂಜಾರಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 20 ವಷ೯ಗಳಿಂದ ಗೋಕಾಕ್ ನಗರಸಭೆಯಲ್ಲಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ತಮ್ಮ ಲಖನ್ ಜಾರಕಿಹೊಳಿಯವರು ಹಿಡಿತದಲ್ಲಿದೆ. ನಗರಸಭೆಯಲ್ಲಿ ಏನಾದರೂ ನಡೆಯಬೇಕೆಂದರೆ ಈ ಇಬ್ಬರೂ ಮುಖಂಡರ ಅಪ್ಪಣೆ ಇಲ್ಲದೇ ಆಗುತ್ತಿರಲಿಲ್ಲ.

ಗೋಕಾಕ ನಗರಸಭೆಯಲ್ಲಿ ಅವ್ಯವಹಾರ ಆರೋಪ.. ತನಿಖೆಗೆ ಬಿಜೆಪಿ ಮುಖಂಡರ ಒತ್ತಾಯ

ಆದರೆ, ಇತ್ತೀಚಿನ ದಿನಗಳಲ್ಲಿ ಅನರ್ಹ ಶಾಸಕ ರಮೇಶ್​​ ಜಾರಕಿಹೊಳಿ, ಲಖನ್​ ಚಾರಕಿಹೊಳಿ ಮತ್ತು ನಗರಸಭೆಯ 4 ನಾಲ್ಕು ಜನ ಸದಸ್ಯರು ಸೇರಿ ನಗರಸಭೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅಳಿಯ ಅಂಬಿರಾಮ್​ ಪಾಟೀಲ್​ ಆರೋಪಿಸಿದ್ದರು.

ಆದರೆ, ಇಲ್ಲಿಯವರೆಗೂ ಅಂಬಿರಾವ್​​ ಪಾಟೀಲ್​ ಈ ಕುರಿತು ಸ್ಪಷ್ಟೀಕರಣ ನೀಡಿಲ್ಲ. ಇದರಿಂದ ತಾಲೂಕಿನ ಜನರಲ್ಲಿ ಸಂಶಯ ಹುಟ್ಟಿದ್ದು ಚರ್ಚೆಗೆ ಕಾರಣವಾಗಿದೆ. ಅದಕ್ಕಾಗಿ ಕೂಡಲೇ ಸರ್ಕಾರ ಈ ಕುರಿತು ಕ್ರಮಕೈಗೊಂಡು ಸಂತ್ಯಾಂಶವನ್ನು ಬಯಲಿಗೆಳೆಯಬೇಕು. ಇಲ್ಲವಾದರೆ ಪ್ರತಿಭಟಿಸುವುದಾಗಿ ತಿಳಿಸಿದರು.

ABOUT THE AUTHOR

...view details