ಬೆಳಗಾವಿ:ರಾಜ್ಯಸಭೆ ನೂತನ ಸದಸ್ಯ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಚೇರಿಯ ಉದ್ಘಾಟನಾಸಮಾರಂಭ ಬೆಳಗಾವಿ ನಗರದಲ್ಲಿರುವ ಜಿಲ್ಲಾ ಪಂಚಾಯತ್ ಹಳೆಯ ಕಟ್ಟಡದಲ್ಲಿ ನಡೆಯಿತು.
ಸಫಾಯಿ ಕರ್ಮಚಾರಿ ಮಹಿಳೆಯಿಂದ ಕಚೇರಿ ಉದ್ಘಾಟನೆ ಮಾಡಿಸಿದ ಈರಣ್ಣ ಕಡಾಡಿ - ರಾಜ್ಯಸಭೆ ನೂತನ ಸದಸ್ಯ ಈರಣ್ಣ ಕಡಾಡಿ ಕಚೇರಿ ಉದ್ಘಾಟನೆ
ರಾಜ್ಯಸಭೆಯ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಈರಣ್ಣ ಕಡಾಡಿ ತಮ್ಮ ಜನಸಂಪರ್ಕ ಕಚೇರಿಯ ಉದ್ಘಾಟನೆಯನ್ನು ಸಫಾಯಿ ಕರ್ಮಚಾರಿ ಮಹಿಳೆಯೊಬ್ಬರಿಂದ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ವಿಶೇಷತೆ ಮೆರೆದರು.
![ಸಫಾಯಿ ಕರ್ಮಚಾರಿ ಮಹಿಳೆಯಿಂದ ಕಚೇರಿ ಉದ್ಘಾಟನೆ ಮಾಡಿಸಿದ ಈರಣ್ಣ ಕಡಾಡಿ Iranna kadadi new office open](https://etvbharatimages.akamaized.net/etvbharat/prod-images/768-512-8630945-148-8630945-1598895265315.jpg)
ಸಫಾಯಿ ಕರ್ಮಚಾರಿ ಮಹಿಳೆಯಿಂದ ಕಚೇರಿ ಉದ್ಘಾಟನೆ
ಕೋವಿಡ್-19 ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ನಡೆದ ಜನಸಂಪರ್ಕ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ, ಕರ್ನಾಟಕ ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ, ಶಾಸಕ ಅನಿಲ್ ಬೆನಕೆ ಮತ್ತಿತರರು ಉಪಸ್ಥಿತರಿದ್ದರು.