ಬೆಳಗಾವಿ: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ನಗರದ ಬಸವನ ಕುಡಚಿಯ ನವಗ್ರಹ ದೇವಸ್ಥಾನದಲ್ಲಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಹಾಗೂ ಸಸಿ ನೆಟ್ಟರು.
ರವಿ ಡಿ.ಚನ್ನಣ್ಣನವರ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಅಭಿಮಾನಿಗಳು - ರವಿ ಡಿ.ಚನ್ನಣ್ಣನವರ್ ಅಭಿಮಾನಿಗಳು
ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಹುಟ್ಟುಹಬ್ಬವನ್ನು ಬೆಳಗಾವಿಯಲ್ಲಿ ಅವರ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.
![ರವಿ ಡಿ.ಚನ್ನಣ್ಣನವರ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಅಭಿಮಾನಿಗಳು dfd](https://etvbharatimages.akamaized.net/etvbharat/prod-images/768-512-8145589-thumbnail-3x2-vis.jpg)
ಐಪಿಎಸ್ ರವಿ ಡಿ.ಚನ್ನಣ್ಣನವರ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಅಭಿಮಾನಿಗಳು
ಅಧಿಕಾರಿಯ ಅಭಿಮಾನಿ ಬಳಗದಿಂದ 100 ಸಸಿ ನೆಡುವ ಮೂಲಕ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನವಗ್ರಹ ದೇವಸ್ಥಾನದಲ್ಲಿ ಅಭಿಷೇಕ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಚೆನ್ನಣ್ಣವರ್ ಸೇವೆ ಹೀಗೆಯೇ ಮುಂದುವರಿಯಲಿ. ನ್ಯಾಯದ ಪರ ಕೆಲಸ ಮಾಡಲಿ, ದೇವರು ಅವರಿಗೆ ಒಳ್ಳೆಯ ಆರೋಗ್ಯ ನೀಡಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ.