ಬೆಳಗಾವಿ :ಕೇಂದ್ರ ಸರ್ಕಾರ ಯಾವ ರೀತಿ ಹಿಂದಿ ದಿವಸ್ ಆಚರಣೆ ಮಾಡುತ್ತಿದೆಯೋ ಅದೇ ರೀತಿ ಅಂತಾರಾಷ್ಟ್ರೀಯ ಕನ್ನಡಭಾಷಾ ದಿನವನ್ನೂ ಆಚರಿಸುವಂತೆ ಒತ್ತಾಯಿಸಿ ನಗರದ ಕೇಂದ್ರ ಅಂಚೆ ಕಚೇರಿ ಮುಂಭಾಗದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಂತಾರಾಷ್ಟ್ರೀಯ ಕನ್ನಡಭಾಷಾ ದಿನ ಆಚರಣೆಯಾಗಬೇಕು : ಕರ್ನಾಟಕ ನವ ನಿರ್ಮಾಣ ಸೇನೆ ಒತ್ತಾಯ - Karnataka Nava nirmana sene
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗುವಂತೆ ಆಗಬೇಕು. ಯಾವ ರೀತಿ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆಯೋ ಅದೇ ರೀತಿ ಅಂತಾರಾಷ್ಟ್ರೀಯ ಕನ್ನಡ ದಿನವನ್ನು ಆಚರಿಸಬೇಕು..
ಅಂತಾರಾಷ್ಟ್ರೀಯ ಕನ್ನಡ ದಿನಾಚರಣೆಯ ಭಿತ್ತಿಪತ್ರ ಅಂಟಿಸಿ, ಅಂಚೆ ಇಲಾಖೆ ಅಧಿಕಾರಿಗಳಿಗೆ ಸಿಹಿ ವಿತರಿಸುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ ನವ ನಿರ್ಮಾಣ ಸೇನೆಯ ಪದಾಧಿಕಾರಿಗಳು, ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗುವಂತೆ ಆಗಬೇಕು. ಯಾವ ರೀತಿ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆಯೋ ಅದೇ ರೀತಿ ಅಂತಾರಾಷ್ಟ್ರೀಯ ಕನ್ನಡ ದಿನವನ್ನು ಆಚರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಹಿಂದಿ ಭಾಷೆಗೆ ಕೇವಲ 200 ವರ್ಷಗಳಷ್ಟು ಇತಿಹಾಸವಿದೆ. ಆದರೆ, ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ನಮಗೆ ಬೇರೆ ಭಾಷೆಗಳ ಮೇಲೆ ಯಾವುದೇ ರೀತಿಯ ದ್ವೇಷವಿಲ್ಲ. ಆದರೆ, ನಮ್ಮ ಭಾಷೆಗೆ ಸಿಗಬೇಕಾದ ಗೌರವ ಸಿಗಬೇಕು ಎಂದು ಆಗ್ರಹಿಸಿದರು.