ಕರ್ನಾಟಕ

karnataka

ETV Bharat / state

ಬೆಳಗಾವಿ ಪೊಲೀಸರಿಂದ ಅಂತರ್​ ರಾಜ್ಯ ಕಳ್ಳರ ಬಂಧನ: ಕಂಟ್ರಿ ಪಿಸ್ತೂಲ್, ಚಿನ್ನಾಭರಣ ವಶ

ಬೆಳಗಾವಿ ನಗರದಲ್ಲಿ ಕಳ್ಳತನ ನಡೆಸಿದ್ದ ಗೋವಾ ಮೂಲದ ಕಳ್ಳರನ್ನು ಬೆಳಗಾವಿ ಪೊಲೀಸರು ಬಂಧಿಸಿ ಅವರಿಂದ ಕಂಟ್ರಿ ಪಿಸ್ತೂಲ್, ಚಿನ್ನಾಭರಣ ಸೇರಿ 51.60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Belagavi police
ಅಂತರ್​ ರಾಜ್ಯ ಕಳ್ಳರ ಬಂಧನ

By

Published : Dec 17, 2020, 7:59 PM IST

ಬೆಳಗಾವಿ:ಕಾನ್ಸ್​ಟೇಬಲ್​ಗಳಿಬ್ಬರ ಖೆಡ್ಡಾಕ್ಕೆ ಬಿದ್ದಿದ್ದ ಆರೋಪಿಗಳಿಬ್ಬರ ಜನ್ಮ ಜಾಲಾಡಿರುವ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು, ಮನೆಗಳ್ಳರಿಂದ ಕಂಟ್ರಿ ಪಿಸ್ತೂಲ್, ಐದು ಜೀವಂತ ಗುಂಡುಗಳು, ಚಿನ್ನಾಭರಣ ಸೇರಿ 51.60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ಶಾಹಪುರದ ಸ್ವರಸ್ವತಿ ನಗರ ಮೂಲದ ಗೋವಾದಲ್ಲಿ ನೆಲೆಸಿರುವ ಪ್ರಕಾಶ ಪಾಟೀಲ (30), ಪಶ್ಚಿಮ ಬಂಗಾಳದ ನಿತೈ ಮಂಡಲ (41) ಬಂಧಿತರು. ಡಿಸೆಂಬರ್ 6ರಂದು ಗ್ರಾಮೀಣ ಠಾಣೆಯ ಕಾನ್ಸ್​​ಟೇಬಲ್‍ಗಳಿಬ್ಬರ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.

ಅಂತರ್​ ರಾಜ್ಯ ಕಳ್ಳರ ಬಂಧನ

ವಿಚಾರಣೆ ವೇಳೆ ಬೆಳಗಾವಿ ಗ್ರಾಮೀಣ ಠಾಣೆ, ಎಪಿಎಂಸಿ, ಕ್ಯಾಂಪ್, ಮಾರಿಹಾಳ ಹಾಗೂ ಮಾಳಮಾರುತಿ ಠಾಣೆಯ ವ್ಯಾಪ್ತಿಯ ಮನೆಗಳಿಗೆ ಕನ್ನ ಹಾಕಿರುವ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಬಂಧಿತರಿಂದ 8 ಲಕ್ಷ ರೂ. ಮೌಲ್ಯದ ಹುಂಡೈ ಕಾರು, 60 ಸಾವಿರ ರೂ. ಮೌಲ್ಯದ ಕಂಟ್ರಿ ಪಿಸ್ತೂಲ್, ಐದು ಜೀವಂತ ಗುಂಡುಗಳು ಹಾಗೂ 42.40 ಲಕ್ಷ ರೂ. ಮೌಲ್ಯದ 848 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಓದಿ...ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಕಳ್ಳರ ಹಾವಳಿ: ಎಚ್ಚರ ವಹಿಸುವಂತೆ ಪೊಲೀಸ್​ ಇಲಾಖೆ ಮನವಿ

ಪೊಲೀಸರಿಗೆ ಚಾಕು ತೋರಿಸಿದ್ದ ದುಷ್ಕರ್ಮಿಗಳು:ಬೆಳಗಾವಿ ತಾಲೂಕಿನ ಝಾಡ್‍ಶಹಾಪುರ ಗ್ರಾಮದಲ್ಲಿ ಡಿಸೆಂಬರ್ 6ರಂದು ಮನೆಗಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳ ಕೃತ್ಯ ಸ್ಥಳೀಯರ ಗಮನಕ್ಕೆ ಬಂದಿತ್ತು. ಚೂರಿಯಿಂದ ಹೆದರಿಸಿ ಗ್ರಾಮಸ್ಥರಿಂದ ತಪ್ಪಿಸಿಕೊಂಡು ಹೋಗಿದ್ದರು. ತಕ್ಷಣವೇ ಸ್ಥಳೀಯರು ಗ್ರಾಮೀಣ ಠಾಣೆಯ ಪೊಲೀಸರ ಗಮನಕ್ಕೆ ತಂದಿದ್ದರು.

ಝಾಡ್‍ಶಹಾಪುರ ಗ್ರಾಮದ ಜಮೀನೊಂದರಲ್ಲಿ ತಪ್ಪಿಸಿಕೊಂಡು ಹೊರಟಿದ್ದ ಆರೋಪಿಗಳನ್ನು ಗ್ರಾಮೀಣ ಠಾಣೆಯ ಕಾನ್ಸ್​ಟೇಬಲ್​ಗಳಾದ ಚೆನ್ನಪ್ಪ ಹುಣಚ್ಯಾಳ್ ಹಾಗೂ ಯೋಗೇಶ ತಳೆವಾಡ ಚೇಜ್ ಮಾಡಿದ್ದರು. ಆಗ ಆರೋಪಿಗಳು ಪೊಲೀಸರಿಗೆ ಚೂರಿ ತೋರಿಸಿ ಹೆದರಿಸಿದ್ದಾರೆ. ಆದರೂ ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಹಿಡಿದಿದ್ದರು. ಪೊಲೀಸರ ಸಾಹಸ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿತ್ತು.

ABOUT THE AUTHOR

...view details