ಕರ್ನಾಟಕ

karnataka

ETV Bharat / state

ಅಯೋಧ್ಯಾ ರಾಮ ಮಂದಿರದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ: ಗೋಪಾಲ್ ಜೀ - 7th District and Sessions Court Chikkodi

ಆಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ - ಜಗತ್ತಿಗೆ ರಾಮನ ಪರಿಚಯ ಮಾಡಿ ಕೊಟ್ಟವರು ವಾಲ್ಮೀಕಿ - ಸಂಬಂಧಿಕನ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Gopal G in charge of the construction Ram temple
ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ ಜಿ

By

Published : Feb 9, 2023, 9:05 AM IST

ವಾಲ್ಮೀಕಿ ಅವರನ್ನು ಕೃತಜ್ಞತೆ ಹಾಗೂ ಗೌರವದಿಂದ ನೋಡಬೇಕಾಗಿದೆ.

ಚಿಕ್ಕೋಡಿ (ಬೆಳಗಾವಿ) :ಮಹರ್ಷಿ ವಾಲ್ಮೀಕಿ ಅವರು ಒಂದು ವೇಳೆ ಇರಲಿಲ್ಲ ಅಂದರೇ ರಾಮನ ಪರಿಚಯ ಜನಕ್ಕೆ ಆಗುತ್ತಿರಲಿಲ್ಲ, ಜಗತ್ತಿಗೆ ರಾಮನ ಪರಿಚಯ ಮಾಡಿ ಕೊಟ್ಟವರು ವಾಲ್ಮೀಕಿ. ಹಿಗಾಗಿ ನಾವು ವಾಲ್ಮೀಕಿ ಅವರನ್ನು ಕೃತಜ್ಞತೆ ಹಾಗೂ ಗೌರವದಿಂದ ನೋಡಬೇಕಾಗಿದೆ. ಇದರಿಂದ ಅಯೋಧ್ಯೆ ಪರಿಸರದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ ಜಿ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತೋರಣಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದ ಬಜರಂಗದಳ ಕಾರ್ಯಕರ್ತರ ಬೈಠಕ್ ನಲ್ಲಿ ಗೋಪಾಲ ಜಿ ಭಾಗವಹಿಸಿ ಮಾತನಾಡಿದರು. ಈ ಭಾಗದಲ್ಲಿ ಮಹರ್ಷಿ ವಾಲ್ಮೀಕಿ ಆರಾಧಕರು ಹೆಚ್ಚಾಗಿದ್ದಾರೆ, ಶ್ರಿರಾಮನನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ವಾಲ್ಮೀಕಿ ಮಾಡಿದ್ದಾರೆ, ಅಯೋಧ್ಯೆ ಪರಿಸರದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು, ಇಲ್ಲಿನ ಭಕ್ತರು ವಾಲ್ಮೀಕಿ ಬೆಳ್ಳಿ ಮೂರ್ತಿ ಕೊಟ್ಟಿದ್ದಾರೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹೇಳಿದರು.

ಚಿಕ್ಕೋಡಿ ಉಪವಿಭಾಗದ ಪವಿತ್ರ ಜಲ ರಾಮ ಮಂದಿರದಲ್ಲಿ ಅರ್ಪಣೆ :ಚಿಕ್ಕೋಡಿ ಉಪವಿಭಾಗದ ಎಲ್ಲಾ ಹನುಮಾನ್ ಮಂದಿರದ ಅಭಿಷೇಕದ ಜಾಲವನ್ನು ಅಯೋಧ್ಯಾ ರಾಮ ಮಂದಿರದಲ್ಲಿ ಅರ್ಪಣೆ ಮಾಡಲಾಗುವುದು ಈಗಾಗಲೇ ಈ ಭಾಗದ ತೋರಣಹಳ್ಳಿ ಹನುಮ ಮಂದಿರದಲ್ಲಿ ಸಂಗ್ರಹಿಸಿಡಲಾಗಿದೆ. ಇಲ್ಲಿಂದ ಅಯೋಧ್ಯೆ ರಾಮ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಹಾಕಲಾಗುವುದು ಎಂದು ಹೇಳಿದರು.

ಇದೇ ವೇಳೆ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರನ್ನು ಮರೆಯಬಾರದು ಎಂಬ ದೃಷ್ಟಿಯಿಂದ ಅಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಸಂತೋಷ ಜಿ ಅವರು ಹೇಳಿದ್ದಾರೆ, ಈ ಪ್ರಕಾರದ ಅನುಗುಣವಾಗಿ ತೋರಣಹಳ್ಳಿ ಗ್ರಾಮದಿಂದ ಈ ಕಾರ್ಯಕ್ರಮ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಸಹೋದರನನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ.

ಸಂಬಂಧಿಕನ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ : ಗ್ರಾಮಸ್ಥರ ಹಾಗೂ ಕುಟುಂಬಸ್ಥರ ತಾತ್ಸಾರದ ಮಾತುಗಳನ್ನು ಕೇಳಿ ಸಹೋದರನ್ನು ಕೊಲೆ ಮಾಡಿರುವ ಆರೋಪಿಗೆ ಚಿಕ್ಕೋಡಿ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಸಂಬಂಧದಲ್ಲಿ ಸಹೋದರಾಗುವ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗೆ ಚಿಕ್ಕೋಡಿ 7 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 18 ಸಾವಿರ ರೂ ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ. ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದ ಆರೋಪಿ ಭೀಮಣ್ಣ ಭರಮು ಚಿಪ್ಪರಗಿ ಇತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ 2007 ರಂದು ಅಣ್ಣಪ್ಪ ನೇಮಣ್ಣಾ ಚಿಪ್ಪರಗಿ ಕೊಲೆಯಾದ ವ್ಯಕ್ತಿ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನ ಗ್ಲಾಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಚಿಪ್ಪರಗಿ ಕಾರ್ಖಾನೆ ಬಂದ್ ಆದ ಬಳಿಕ ಗುಜರಾತಕ್ಕೆ ಹೋಗಿ ಕೆಲಸ ನಿರ್ವಹಿಸುತ್ತಿದ್ದ. ಒಮ್ಮೆ ಊರಿಗೆ ಬಂದಾಗ ಅರೋಪಿ ಭೀಮಣ್ಣ ನನಗೂ ಕೆಲಸ ಕೊಡಿಸು ಅಂತ ಕೇಳಿಕೊಂಡಾಗ ಅಣ್ಣಪ್ಪ ಆರೋಪಿಯನ್ನು ಗುಜರಾತಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ್ದನು.

ಆದರೆ, ಬಹಳ ದಿನ ಕೆಲಸ ಮಾಡದೇ ಮರಳಿ ಊರಿಗೆ ಬಂದ ಆರೋಪಿಗೆ ಮನೆಯವರು ತಾತ್ಸಾರ ಮನೋಭಾವ ತೋರುತ್ತಿದ್ದರು. ನೋಡು ಅಣ್ಣಪ್ಪ ಕಾರ್ಖಾನೆಯಲ್ಲಿ ಕೆಲಸ ಮಾಡಿ ಮನೆ ಕಟ್ಟಿಸಿಕೊಂಡ ನೀನೆನು ಮಾಡುತ್ತಿಯಾ, ಊರಲ್ಲಿ ಒಕ್ಕಲುತನ ಮಾಡುತ್ತೀಯಾ ಅಂತ ಹೇಳಿದಾಗ ಕೋಪಗೊಂಡ ಆರೋಪಿಯು ಅಣ್ಣಪ್ಪನನ್ನು ಕೊಲೆ ಮಾಡಿರುವ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನೂ ಈ ಪ್ರಕರಣದ ವಿಚಾರಣೆ ನಡೆಸಿದ 7 ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಆರೋಪಿತನಿಗೆ ಜೀವಾವಧಿ ಶಿಕ್ಣೆ ಹಾಗೂ 18 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ವೈ.ಬಿ.ತುಂಗಳ ವಾದ ಮಂಡಿಸಿದರು. ಪ್ರಕರಣದ ತನಿಖೆ ಮಾಡಿ ಅಥಣಿ ಸಿಪಿಐ ಶೇಖರೆಪ್ಪ ಎಚ್.ಅವರು ಆರೋಪಿ ಮೇಲೆ ದೋಷಾರೋಪಣೆ ಸಲ್ಲಿಸಿದ್ದರು.

ಇದನ್ನೂ ಓದಿ :ಮೊದಲ ಬಾರಿಗೆ ಬೆಳಗಾವಿ ಪಾಲಿಕೆ ಗದ್ದುಗೆ ಏರಿದ ಬಿಜೆಪಿ: ಬಿಜೆಪಿ ಪಾಲಾದ ಮೇಯರ್, ಉಪಮೇಯರ್ ಹುದ್ದೆ..

ABOUT THE AUTHOR

...view details