ಬೆಳಗಾವಿ: ರೈತರ 300 ಎಕರೆ ಕೃಷಿ ಜಮೀನನ್ನು ಸರ್ಕಾರಿ ಜಮೀನು ಎಂದು ದಾಖಲಿಸುವ ಮೂಲಕ ಸರ್ಕಾರಿ ಸವಲತ್ತುಗಳು ಸಿಗದಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಆಗಿರುವ ತಪ್ಪುಸರಿಪಡಿಸಬೇಕೆಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರಿಗೆ ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.
ಸರ್ಕಾರಿ ಸವಲತ್ತುಗಳು ಸಿಗದಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ: ರೈತರಿಂದ ಪ್ರತಿಭಟನೆ... - belagavi farmers protest
ರೈತರ 300 ಎಕರೆ ಕೃಷಿ ಜಮೀನನ್ನು ಸರ್ಕಾರಿ ಜಮೀನು ಎಂದು ದಾಖಲಿಸಿದ್ದರಿಂದ 300 ಎಕರೆ ಜಮೀನನ್ನು ಹೊಂದಿರುವ 79 ಕ್ಕೂ ಹೆಚ್ಚಿನ ಕುಟುಂಬಗಳು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ ವಂಚಿತರಾಗಿದ್ದಾರೆ. ಹೀಗಾಗಿ ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.
![ಸರ್ಕಾರಿ ಸವಲತ್ತುಗಳು ಸಿಗದಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ: ರೈತರಿಂದ ಪ್ರತಿಭಟನೆ... Protest by farmers](https://etvbharatimages.akamaized.net/etvbharat/prod-images/768-512-9401219-192-9401219-1604311381241.jpg)
ಈ ವೇಳೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡ ರೈತರು, ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ಹಳ್ಳದ ಎಂಬ ಅಡ್ಡ ಹೆಸರಿನ 79 ಕ್ಕೂ ಹೆಚ್ಚಿನ ಕುಟುಂಬಸ್ಥರ 300 ಎಕರೆ ಕೃಷಿ ಜಮೀನನ್ನು ಸರ್ಕಾರಿ ಜಮೀನು ಎಂದು ದಾಖಲು ಮಾಡಿದ್ದಾರೆ. ಇದರಿಂದಾಗಿ 300 ಎಕರೆ ಜಮೀನನ್ನು ಹೊಂದಿರುವ 79 ಕ್ಕೂ ಹೆಚ್ಚಿನ ಕುಟುಂಬಗಳು ಇದೀಗ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ ವಂಚಿತರಾಗಿದ್ದಾರೆ.
ಚಿಕ್ಕಉಳ್ಳಿಗೇರಿ ಹಾಗೂ ಇನಾಮಹೊಂಗಲದಲ್ಲಿರುವ ಸುಮಾರು 300 ಎಕರೆಯಷ್ಟು ರೈತರ ಜಮೀನು ತಾಂತ್ರಿಕ ಕಾರಣಗಳಿಂದ ಜೂನ್ 2020 ರಿಂದ ಸರ್ಕಾರಿ ಜಮೀನು ಎಂದು ದಾಖಲಾಗಿದೆ. ಇದರಿಂದ 79 ಕ್ಕೂ ಹೆಚ್ಚು ರೈತರಿಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಅಧಿಕಾರಿಗಳ ತಪ್ಪಿನಿಂದ ರೈತರು ಶಿಕ್ಷೆ ಅನುಭವಿಸುವಂತಾಗಿದೆ. ಸರ್ಕಾರ ಈ ಕೂಡಲೇ ವಂಶ ಪರಂಪರೆಯಿಂದ ಬಂದ ಸ್ವಯಾರ್ಜಿತ ಜಮೀನಿನ ದಾಖಲೆಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.