ಬೆಳಗಾವಿ :ಇಲ್ಲಿನಬಾಪಟ್ ಗಲ್ಲಿಯಲ್ಲಿರುವ ಶಾಹಿ ಮಸೀದಿಯನ್ನು ಬ್ರಾಹ್ಮಣರು-ಮುಸ್ಲಿಮರು ಸೇರಿಯೇ ಕಟ್ಟಿದ್ದಾರೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಪಟ್ ಅನ್ನುವುದು ಬ್ರಾಹ್ಮಣ ಮನೆತನದ ಹೆಸರು. ಬಾಪಟ್ ಗಲ್ಲಿಯಲ್ಲಿ ಈ ಮೊದಲು ವಾತಾವರಣ ಬಹಳ ಕೆಟ್ಟಿತ್ತು. ಇಂತಹ ಕೆಟ್ಟ ವಾತಾವರಣ ಅಳಸಿ ಹಾಕಲು ಎಲ್ಲರೂ ಪ್ರಯತ್ನಿಸಿದ್ದರು. ಬ್ರಾಹ್ಮಣರು-ಮುಸ್ಲಿಮರು ಸೇರಿ ಶಾಹಿ ಮಸೀದಿ ಕಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತೀಯ ಶಿಲ್ಪಿಗಳು ಮಸೀದಿ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷ ತರುವುದು ಒಳ್ಳೆಯದಲ್ಲ. ನಾವು ಸಹ ಇಂದು ಅಥವಾ ನಾಳೆ ಜಿಲ್ಲಾಧಿಕಾರಿಗಳನ್ನ ಭೇಟಿಯಾಗುತ್ತೇವೆ. ಮಸೀದಿ ಕುರಿತಂತೆ ಶಾಸಕ ಅಭಯ್ ಪಾಟೀಲ್ ಮನವಿ ತಿರಸ್ಕರಿಸುವಂತೆ ಕೋರುತ್ತೇವೆ ಎಂದರು.