ಬೆಳಗಾವಿ:ಮರಾಠಾ ಲಘು ಪದಾತಿದಳ ಕೇಂದ್ರದ ಆಶ್ರಯದಲ್ಲಿ ಭಾರತ-ಜಪಾನ್ ಸೈನಿಕರ ರೋಮಾಂಚನಕಾರಿ ಸಮರಾಭ್ಯಾಸ ನಡೆಯಿತು.
ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನ 40 ಯೋಧರು ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ 40 ಯೋಧರು ಸಮರಾಭ್ಯಾಸದಲ್ಲಿ ಪಾಲ್ಗೊಂಡು ಸಾಹಸ ಪ್ರದರ್ಶಿಸಿದರು. ಎಂಎಲ್ಐಆರ್ಸಿ ಕೇಂದ್ರದಲ್ಲಿ ಜಮಾವಣೆಗೊಂಡ ಉಭಯ ದೇಶದ ಸೈನಿಕರಿಗೆ ಕಾರ್ಯಾಚರಣೆಯ ಸಂಕ್ಷಿಪ್ತ ಮಾಹಿತಿ ನೀಡಲಾಯಿತು.
ಬಳಿಕ ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದ ಬಳಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸುವ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಸಲಾಯಿತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಹೆಲಿಕಾಪ್ಟರ್ನಿಂದ ಹಗ್ಗದ ಸಹಾಯದಿಂದ ಕೆಳಗಿಳಿದ ಯೋಧರು ಸಾಹಸ ಪ್ರದರ್ಶಿಸಿದರು.
ಬ್ರಿಗೇಡಿಯರ್ ಎನ್.ಎಸ್.ಸೋಹಾಲ್ ಹಾಗೂ ಮೇಜರ್ ಜನರಲ್ ಭವನೀಷ್ ಕುಮಾರ್ ಹಾಗೂ ಜಪಾನ್ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಣಕು ಪ್ರದರ್ಶನ ನಡೆಯಿತು.
ಇದನ್ನೂ ಓದಿ:ಉಕ್ರೇನ್-ರಷ್ಯಾ ಯುದ್ಧ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ನಿರ್ಮಲಾ ಸೀತಾರಾಮನ್