ಕರ್ನಾಟಕ

karnataka

ETV Bharat / state

ಭಾರತ ಎ ಮತ್ತು ಶ್ರೀಲಂಕಾ ಎ ಟೆಸ್ಟ್ : ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾಗೆ ಆರಂಭಿಕ ಆಘಾತ - undefined

ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 622 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಬ್ಯಾಟ್ ಮಾಡಿದ ಶ್ರೀಲಂಕಾದ ಆರಂಭಿಕ ದಾಂಡಿಗರು ಮುಗ್ಗರಿಸಿದ್ದು, 82 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಭಾರತ ಎ ಮತ್ತು ಶ್ರೀಲಂಕಾ ಎ ಟೆಸ್ಟ್​​ ಪಂದ್ಯ

By

Published : May 27, 2019, 9:22 AM IST

ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಶ್ರೀಲಂಕಾ-ಎ ನಡುವಿನ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 83ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದು ಆರಂಭಿಕ ಆಘಾತ ಅನುಭವಿಸಿದೆ.

ಭಾರತ ಎ ಮತ್ತು ಶ್ರೀಲಂಕಾ ಎ ಟೆಸ್ಟ್​​ ಪಂದ್ಯ

ಬೆಳಗಾವಿಯ ಅಟೋನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ಟೆಸ್ಟ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 622 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಬ್ಯಾಟ್ ಮಾಡಿದ ಶ್ರೀಲಂಕಾದ ಆರಂಭಿಕ ದಾಂಡಿಗರು ಮುಗ್ಗರಿಸಿದ್ದು 82 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಸಂಗೀತ್ ಕೋರಿ 0, ನಿಶಾಂಕ್ 6 ರನ್ ಗಳಿಸಿ ಔಟಾದರು. ಉತ್ತಮ ಪ್ರದರ್ಶನ ನೀಡುತ್ತಿದ್ದ ಸಧೀರಾ ಸಮರವಿಕ್ರಂ 56ರನ್‌ಗೆ ಔಟಾದರು. ನಂತರ ಬಂದ ಭಾನುಕ್ ರಾಜಪಕ್ಷ ಸೊನ್ನೆ ಸುತ್ತಿದರು. ಭಾರತದ ಪರ ಉತ್ತಮ ಬೌಲಿಂಗ್ ಮಾಡಿದ ಸಂದೀಪ್ ವಾರಿಯರ್ ಹಾಗೂ ಶಿವಂ ದುಭೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

For All Latest Updates

TAGGED:

ABOUT THE AUTHOR

...view details