ಅಥಣಿ: ಕೊರೊನಾ ಜಾಗತಿಕ ವ್ಯಾಧಿ ಹೋಗಲಾಡಿಸಲು ಸದ್ಯ ಲಾಕ್ಡೌನ್ ಮುಂದುವರೆದಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೆಎಸ್ಆರ್ಪಿ ತುಕುಡಿ ತರಿಸಿ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಲಾಕ್ಡೌನ್ಗೆ ಬಗ್ಗದ ಜನ: ಅಥಣಿಯಲ್ಲಿ ಹೆಚ್ಚಿದ ಪೊಲೀಸ್ ಬಂದೋಬಸ್ತ್ - ಅಥಣಿ ಪಟ್ಟಣದಲ್ಲಿ ಕೆ ಎಸ್ ಆರ್ ಪಿ ತುಕುಡಿ
ಅನವಶ್ಯಕವಾಗಿ ಬೈಕ್ ಸವಾರಿ ಮಾಡುತ್ತಿದ್ದವರಿಗೆ ಬೆತ್ತದ ರುಚಿ ತೋರಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಈಗ ಬೈಕಗಳನ್ನು ಸೀಜ್ ಮಾಡಿ ಪುಂಡ ಪೋಕರಿಗಳ ಅಲೆದಾಟ ಕಡಿಮೆಯಾಗುವಂತೆ ಮಾಡಿದ್ದಾರೆ.
ಅನವಶ್ಯಕವಾಗಿ ಬೈಕ್ ಸವಾರಿ ಮಾಡುತ್ತಿದ್ದವರಿಗೆ ಬೆತ್ತದ ರುಚಿ ತೋರಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಈಗ ಬೈಕಗಳನ್ನು ಸೀಜ್ ಮಾಡಿ ಪುಂಡ ಪೋಕರಿಗಳ ಅಲೆದಾಟ ಕಡಿಮೆಯಾಗುವಂತೆ ಮಾಡಿದ್ದಾರೆ.
ಅದೆಷ್ಟು ತಿಳಿಹೇಳಿದರೂ ಜನ ಕೇಳದೆ ರಸ್ತೆಗೆ ಇಳಿದ ಹಿನ್ನೆಲೆಯಲ್ಲಿ ಲಾಠಿ ಬೀಸಿದ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರಿಗಳು ಏನೇ ಮಾಡಿದರೂ ಸಮಾಜದ ಒಳಿತಿಗಾಗಿ ಎಂಬುದನ್ನು ಜನ ಅರಿಯಬೇಕಿದೆ. ಸದ್ಯದ ಮಟ್ಟಿಗೆ ತೊಂದರೆ ಆದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿದ್ದು, ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಮತ್ತು ಸರ್ಕಾರದ ಮನವಿಗೆ ಸ್ಪಂದಿಸಿ ಮನೆಯಲ್ಲಿ ಇರಬೇಕು ಎಂಬುದು ಅಧಿಕಾರಗಳ ಮನವಿಯಾಗಿದೆ.