ಚಿಕ್ಕೋಡಿ : ಎರಡು ದಶಕಗಳಿಂದ ಚಿಕ್ಕೋಡಿ ಜಿಲ್ಲೆ ಮಾಡುವಂತೆ ಕೇಳಿದ್ರು, ನಮ್ಮ ಬೇಡಿಕೆ ಈಡೇರಿಲ್ಲ. ಈಗ ಒಬ್ಬ ಶಾಸಕರು ಕೇಳಿದ ತಕ್ಷಣ ವಿಜಯ ನಗರ ಜಿಲ್ಲೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್ ಸಂಗಪ್ಪಗೋಳ ಆಕ್ರೋಶ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆ ರಚನೆಗೆ ನಿರ್ಧಾರ ಬೆನ್ನಲೆ ಚಿಕ್ಕೋಡಿ ಜಿಲ್ಲೆಗೆ ಹೆಚ್ಚಿದ ಬೇಡಿಕೆ - ಚಿಕ್ಕೋಡಿ ಜಿಲ್ಲೆಗೆ ಹೆಚ್ಚಿದ ಬೇಡಿಕೆ
ವಿಜಯನಗರ ಜಿಲ್ಲೆ ಮಾಡುವ ಮುನ್ನ ಚಿಕ್ಕೋಡಿ ಜಿಲ್ಲೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಎಚ್ಚರಿಸಿದೆ.
ಚಿಕ್ಕೋಡಿ ಜಿಲ್ಲೆ ಮಾಡಲು ಆಗ್ರಹ
ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಿ, ನಂತರ ವಿಜಯನಗರ ಜಿಲ್ಲೆ ಮಾಡಿ. ಚುನಾವಣೆ ವೇಳೆ ಚಿಕ್ಕೋಡಿ ಜಿಲ್ಲೆ ಮಾಡುವುದಾಗಿ ಬಿಜೆಪಿ ಶಾಸಕರು ನಮಗೆ ಭರವಸೆ ಕೊಟ್ಟಿದ್ದರು, ಈಗ ಅದನ್ನು ಮರೆತಿದ್ದಾರೆ. ಪ್ರಧಾನಿ ಮೋದಿ ಎದುರಲ್ಲಿ ಕೊಟ್ಟ ಮಾತನ್ನು ಬಿಜೆಪಿಗರು ಉಳಿಸಿಕೊಳ್ಳಬೇಕು ಎಂದರು.
ಚಿಕ್ಕೋಡಿ ಜಿಲ್ಲೆ ಮಾಡದಿದ್ದರೆ, ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.