ಬೆಳಗಾವಿ :ಮಹಾರಾಷ್ಟ್ರದಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿವೆ. ಅಲ್ಲಿಂದ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ ಎಂದು ಡಿಹೆಚ್‌ಒ ಡಾ.ಎಸ್ ವಿ ಮುನ್ಯಾಳ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಮಾರ್ಚ್ 15ರವರೆಗೆ 2ನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಹೀಗಾಗಿ, ಮಾರ್ಗಸೂಚಿ ಪಾಲನೆ ಅತ್ಯಂತ ಅವಶ್ಯಕ ಎಂದರು.
ಕೊರೊನಾ ಪ್ರಕರಣ ನಿಯಂತ್ರಣದ ಕುರಿತು ಆರೋಗ್ಯಾಧಿಕಾರಿ ಮಾತನಾಡಿರುವುದು.. 7 ದಿನಗಳಲ್ಲಿ ಮಹಾರಾಷ್ಟ್ರದಿಂದ ಬಂದವರ ಟ್ರಾವೆಲ್ ಹಿಸ್ಟರಿ ಕಲೆ ಹಾಕುತ್ತಿದ್ದೇವೆ. ಮುಂಬೈ, ಪುಣೆ, ಅಮರಾವತಿ ಡಿವಿಜನ್ ರೆಡ್ ಅಲರ್ಟ್ ಇದೆ. ಟಿಕೆಟ್ ರಿಸರ್ವೇಶನ್ ಮಾಡಿದವರ ಮಾಹಿತಿ ಪಡೆದು ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಫೋನ್ ಕರೆ ಮಾಡಿ ಹೇಳುತ್ತಿದ್ದೇವೆ.
ಜನರು ತಮ್ಮ ಹಾಗೂ ತಮ್ಮ ಕುಟುಂಬದ ಹಿತದೃಷ್ಟಿಯಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಶೇ.68ರಷ್ಟು ಲಸಿಕೆ ಹಾಕಲಾಗಿದೆ. 2ನೇ ಹಂತದಲ್ಲಿ ಶೇ.38ರಷ್ಟು ಲಸಿಕಾಕರಣ ಆಗಿದೆ. ಜಿಲ್ಲೆಯಲ್ಲಿ ಯಾರಲ್ಲೂ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಅಗತ್ಯ ಬಿದ್ರೆ ಎಲ್ಲೆಡೆ ಚೆಕ್ ಪೋಸ್ಟ್ :ಕಳೆದ 7 ದಿನಗಳಲ್ಲಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅವರ ಮಾಹಿತಿ ಕಲೆ ಹಾಕಲಾಗುತ್ತೆ. ಶನಿವಾರ ರಾತ್ರಿ ಕೊಗನೊಳ್ಳಿ ಟೋಲ್‌ಗೇಟ್ ಬಳಿ ಚೆಕ್‌ಪೋಸ್ಟ್ ಆರಂಭಿಸಲಾಗಿದೆ. ಆರ್‌ಟಿಪಿಸಿಆರ್ ವರದಿ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ಇದೆ. ನಿನ್ನೆ 3900 ಗೂಡ್ಸ್ ವಾಹನ, 7200 ಪ್ಯಾಸೆಂಜರ್ ವಾಹನಗಳು ಬಂದಿವೆ.
ಬೆಳಗಾವಿ ಜಿಲ್ಲೆಯ 14 ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು. ಈಗಾಗಲೇ ಸವದತ್ತಿ ಯಲ್ಲಮ್ಮದೇವಿ, ಚಿಂಚೋಳಿ ಮಾಯಕ್ಕದೇವಿ ದೇವಸ್ಥಾನ ಬಂದ್ ಮಾಡಿದ್ದೇವೆ. ಮಹಾರಾಷ್ಟ್ರದಿಂದ ಬಂದವರ ಟ್ರಾವೆಲ್ ಡೀಟೆಲ್ಸ್ ಪಡೆದು ಅಂತಹವರ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದ್ದಾರೆ.
ಓದಿ:ಕ್ಲಸ್ಟರ್ ಸಂಖ್ಯೆ ಹೆಚ್ಚಾದರೆ ಬೆಂಗಳೂರಿನಲ್ಲಿ ಇನ್ನಷ್ಟು ಏರಿಕೆ ಆಗಲಿದೆ ಕೊರೊನಾ ಸೋಂಕಿತರ ಸಂಖ್ಯೆ
ಮಹಾರಾಷ್ಟ್ರ ಹಾಗೂ ಕರ್ನಾಟಕ ಸಂಪರ್ಕಿಸುವ ಎಲ್ಲ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಕುಟ್ಟಳಗಿ-ಗುಡ್ಡಾಪುರ ರಸ್ತೆ, ಕಾಗವಾಡ-ಗಣೇಶವಾಡಿ, ಕಾಗವಾಡ-ಮೀರಜ್ ಹಾಗೂ ಕೊಗನೊಳ್ಳಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ.