ಚಿಕ್ಕೋಡಿ(ಬೆಳಗಾವಿ) :ಜಿಲ್ಲೆಯ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಒಂದೇ ದಿನದಲ್ಲಿ 66 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಮಂಗಸೂಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೂ ಇದ್ದಾರೆ ಎಂದು ತಹಶೀಲ್ದಾರರಾದ ಪರಿಮಳಾ ದೇಶಪಾಂಡೆ ತಿಳಿಸಿದ್ದಾರೆ.
ಕಾಗವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೇರಿ 66 ಮಂದಿಗೆ ಕೊರೊನಾ - Tahsildar's Parimala Deshpande
ದಿನದಿಂದ ದಿನಕ್ಕೆ ಚಿಕಿತ್ಸೆ ನೀಡುವ ವೈದ್ಯರನ್ನು, ವೈದ್ಯಾಧಿಕಾರಿಗಳನ್ನೂ ಬಿಡದೆ ಕಾಡುತ್ತಿದೆ ಕೊರೊನಾ. ತಾಲೂಕಿನ ಮಂಗಸೂಳಿಯ 13, ಶಿರಗುಪ್ಪಿ 11, ಉಗಾರ ಖುರ್ದ 3, ಜುಗುಳ 4, ಬೆವನೂರ 3, ಉಗಾರ ಬುದ್ರುಕ್ 3, ಐನಾಪುರ 5, ಕೃಷ್ಣಾ ಕಿತ್ತೂರ 4, ಕಾಗವಾಡ 16 ಪ್ರಕರಣ. ಇನ್ನೂ ಕುಸನಾಳ, ಮೋಳೆ, ಚಮಕೇರಿ ಹಾಗೂ ಸಂಬರಗಿಯಲ್ಲಿ ತಲಾ ಒಂದು ಕೊರೊನಾ ಪ್ರಕರಣ ಪತ್ತೆಯಾದ ವರದಿ..
ದಿನದಿಂದ ದಿನಕ್ಕೆ ಚಿಕಿತ್ಸೆ ನೀಡುವ ವೈದ್ಯರನ್ನು, ವೈದ್ಯಾಧಿಕಾರಿಗಳನ್ನೂ ಬಿಡದೆ ಕಾಡುತ್ತಿದೆ ಕೊರೊನಾ. ತಾಲೂಕಿನ ಮಂಗಸೂಳಿಯ 13, ಶಿರಗುಪ್ಪಿ 11, ಉಗಾರ ಖುರ್ದ 3, ಜುಗುಳ 4, ಬೆವನೂರ 3, ಉಗಾರ ಬುದ್ರುಕ್ 3, ಐನಾಪುರ 5, ಕೃಷ್ಣಾ ಕಿತ್ತೂರ 4, ಕಾಗವಾಡ 16 ಪ್ರಕರಣ. ಇನ್ನೂ ಕುಸನಾಳ, ಮೋಳೆ, ಚಮಕೇರಿ ಹಾಗೂ ಸಂಬರಗಿಯಲ್ಲಿ ತಲಾ ಒಂದು ಕೊರೊನಾ ಪ್ರಕರಣ ಪತ್ತೆಯಾದ ವರದಿಯಾಗಿದೆ.
ಕಾಗವಾಡ ತಾಲೂಕಿನಲ್ಲಿ ಸೋಂಕು ಪತ್ತೆಯಾದ ರೋಗಿಗಳಲ್ಲಿ 60 ವರ್ಷದ ಮೇಲ್ಪಟ್ಟವರನ್ನು ಹಾಗೂ ಸಕ್ಕರೆ ಕಾಯಿಲೆ ಹಾಗೂ ಹೃದಯ ರೋಗದಿಂದ ಬಳಲುತ್ತಿರುವವನ್ನು ಬೆಳಗಾವಿಯ ಬಿಮ್ಸ್‌ಗೆ ರವಾನಿಸಲಾಗುತ್ತಿದೆ. ಉಳಿದವರಿಗೆ ಶಿರಗುಪ್ಪಿಯಲ್ಲಿ ತಯಾರಿಸಲಾಗಿದ್ದ ಕೊರೊನಾ ಕೇರ್ ಸೆಂಟರನಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಹಶೀಲ್ದಾರರಾದ ಪರಿಮಳಾ ದೇಶಪಾಂಡೆ ಹೇಳಿದರು.