ಚಿಕ್ಕೋಡಿ: ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದ್ದರಿಂದ ಚಿಕ್ಕೋಡಿ ತಹಶೀಲ್ದಾರ್ ಸಂತೋಷ ಬಿರಾದಾರ್ ಹಾಗೂ ಎಸಿ ರವೀಂದ್ರ ಕರಲಿಂಗನವರ, ಮಹಾರಾಷ್ಟ್ರದ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್ ಸೇರಿದಂತೆ ಹಲವು ಬ್ಯಾರೇಜ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಹಾರಾಷ್ಟ್ರದ ರಾಜಾಪೂರ ಡ್ಯಾಂಗೆ ಭೇಟಿ ನೀಡಿದ ಚಿಕ್ಕೋಡಿ ಅಧಿಕಾರಿಗಳು.. - undefined
ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದ್ದರಿಂದ ಚಿಕ್ಕೋಡಿಯ ಎಸಿ, ಮತ್ತು ತಹಶೀಲ್ದಾರ್ ಕೃಷ್ಣಾ ನದಿಗೆ ಸೇರಿದ ಹಲವು ಬ್ಯಾರೇಜ್ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕೃಷ್ಣಾ ನದಿ
ಬೆಳಗಿನಿಂದ ಹೆಚ್ಚುತ್ತಲೇ ಇರುವ ಕೃಷ್ಣಾ ನದಿಯ ಒಳ ಹರಿವಿನ ಪ್ರಮಾಣ, ಸದ್ಯ 20 ಸಾವಿರ ಕ್ಯೂಸೆಕ್‌ಗೆ ಏರಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ನೀರಿನ ಒಳ ಹರಿವು ಹೆಚ್ಚಾಗಿರುವ, ಕಲ್ಲೋಳ, ಯಡೂರು ಸೇರಿದಂತೆ ವಿವಿಧ ಬ್ಯಾರೇಜ್ಗಳಿಗೆ ಎಸಿ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಶೀಲಿಸಿದ್ದಾರೆ.
ಕೃಷ್ಣಾನದಿಗೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.