ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ: ಬೆಳಗಾವಿಯಲ್ಲಿ ಸಚಿವ ಜಾರಕಿಹೊಳಿ‌ ದಿಢೀರ್ ಸಭೆ - Increase of Corona number

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಚೆರ್ಚೆ ಮಾಡಲಾಗಿದೆ. ಕೊರೊನಾ ಎರಡನೇ ಅಲೆ ಬರದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.

ದಿಢೀರ್ ಸಭೆ
ದಿಢೀರ್ ಸಭೆ

By

Published : Mar 1, 2021, 4:06 PM IST

ಬೆಳಗಾವಿ:ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಚಿವ ರಮೇಶ್‌ ಜಾರಕಿಹೊಳಿ ಬೆಳಗಾವಿಯ ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆಗೆ ದಿಢೀರ್ ಸಭೆ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಚೆರ್ಚೆ ಮಾಡಲಾಗಿದೆ. ಕೊರೊನಾ ಎರಡನೇ ಅಲೆ ಬರದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಗಡಿಯಲ್ಲಿ ಹೆಚ್ಚಾಗಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ‌

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ನಾನು ಮಾತನಾಡಲ್ಲ, ಅವರ ಹೇಳಿಕೆಗೆ ನೋ ಕಾಮೆಂಟ್. ಕಾಂಗ್ರೆಸ್ ಸಮಾವೇಶದ ಬಗ್ಗೆಯೂ ನಾನು ಮಾತನಾಡಲ್ಲ. ಅವರ ಪಕ್ಷ ಏನು ಬೇಕಾದರೂ ಮಾಡಲಿ, ಸ್ವಾಗತಿಸುತ್ತೇನೆ. ನಮ್ಮ ಪಕ್ಷದ ಬಗೆಗಿನ ಪ್ರಶ್ನೆಗೆ ಮಾತ್ರ ಉತ್ತರಿಸುತ್ತೇನೆ. ಬೇರೆ ಪಕ್ಷಗಳ ಬಗ್ಗೆ ಕೇಳಬೇಡಿ ಎಂದರು.

ಓದಿ.. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಜನ್ಮದಿನ ಸಂಭ್ರಮ: ಅಭಿಮಾನಿಗಳಿಂದ ಕ್ಷೀರಾಭಿಷೇಕ

ಬಿ.ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ. ಅವರಿಗೆ ಪದೆ ಪದೇ ಫೋನ್ ಮಾಡಿ ಮಾತನಾಡುವ ಸ್ವಭಾವ ನಮ್ಮದಲ್ಲ. ಕೆಲಸ ಇದ್ದಾಗ ಮಾತ್ರ ಹೋಗುತ್ತೇವೆ, ಮಾತನಾಡುತ್ತೇವೆ. ಸಿಎಂ ಅವರ ಸ್ವಭಾವ ಒಳ್ಳೆಯದಿದೆ. ಅಭಿವೃದ್ಧಿ ವಿಚಾರದಲ್ಲಿ ಅವರದು ಎತ್ತಿದ ಕೈ. ಅವರ ಬಗ್ಗೆ ಗೌರವ ಇದೆ ಎಂದರು.

ABOUT THE AUTHOR

...view details