ಚಿಕ್ಕೋಡಿ: ಉತ್ತರ ಕರ್ನಾಟಕದ ಪ್ರಖ್ಯಾತ ಜಾತ್ರೆಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಬೃಹತ್ ಕೃಷಿಮೇಳ, ದನಗಳ ಸಂತೆ ಹಾಗೂ ಜಾತ್ರೆಯನ್ನು ರದ್ದು ಮಾಡಲಾಗಿದೆ.
ಐನಾಪುರದ ಬೃಹತ್ ಕೃಷಿಮೇಳ, ದನಗಳ ಸಂತೆ ಹಾಗೂ ಜಾತ್ರೆ ರದ್ದು - Inapur Agricultural Fair
ಕೋವಿಡ್ ಹಿನ್ನೆಲೆ ಐನಾಪುರ ಪಟ್ಟಣದ ಶ್ರೀ ಸಿದ್ದೇಶ್ವರ ದೇವರ 51ನೇ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ.
ಕೋವಿಡ್ ಹಿನ್ನೆಲೆ ಐನಾಪುರ ಪಟ್ಟಣದ ಶ್ರೀ ಸಿದ್ದೇಶ್ವರ ದೇವರ 51ನೇ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ಪಟ್ಟಣದ ಹಿರಿಯರಾದ ರಾಜಗೌಡ ಪಾಟೀಲ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷ ಜಾತ್ರೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಸೇರುತ್ತಿದ್ದರು. ಈ ವರ್ಷ ಜಾತ್ರೆಯಲ್ಲಿ ಕೃಷಿಮೇಳ ರದ್ದುಪಡಿಸಲಾಗಿದೆ. ಸಾವಿರಾರು ಜಾನುವಾರಗಳನ್ನು ಜಾತ್ರೆಯಲ್ಲಿ ಸೇರಿಸಲಾಗುತ್ತಿತ್ತು. ಈ ಬಾರಿ ಎಲ್ಲವೂ ರದ್ದಾಗಿವೆ. ಕೃಷಿಮೇಳ ಹಾಗೂ ದನಗಳ ಸಂತೆ ರದ್ದು ಮಾಡಿದ್ದು, ದಯಮಾಡಿ ಭಕ್ತರು, ಅಂಗಡಿಕಾರರು ಐನಾಪುರ ಪಟ್ಟಣದ ಜಾತ್ರೆಗೆ ಆಗಮಿಸಬಾರದೆಂದು ರಾಜಗೌಡ ಪಾಟೀಲ ಕೋರಿದ್ದಾರೆ.