ಚಿಕ್ಕೋಡಿ:ಮಹಾರಾಷ್ಟ್ರದ ಕೊಲ್ಲಾಪುರ ನಗರದ ಲಕ್ಷ್ಮೀಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್ ಆಟದ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಕಲ್ಲು ತುರಾಟ ನಡೆದಿದೆ.
ಕ್ರಿಕೆಟ್ ಆಡುವ ವೇಳೆ 2 ಗುಂಪುಗಳ ನಡುವೆ ಕಲ್ಲು ತೂರಾಟ: 10 ಜನರಿಗೆ ಗಂಭೀರ ಗಾಯ - undefined
ಕ್ರಿಕೆಟ್ ಆಟದ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಕಲ್ಲು ತುರಾಟದಲ್ಲಿ ಪೊಲೀಸರೂ ಸೇರಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಘಟನೆಯಲ್ಲಿ ಕಲ್ಲು ಮತ್ತು ಗಾಜಿನ ಬಾಟಲಿಗಳ ಸುರಿಮಳೆಯಾಗಿದೆ.
ಕ್ರಿಕೆಟ್ ಆಡುವ ವೇಳೆ ಎರಡು ಗುಂಪು ಘರ್ಷಣೆ
ಎರಡು ಗುಂಪುಗಳ ನಡುವಿನ ಕಲ್ಲು ತುರಾಟದಲ್ಲಿ ಪೊಲೀಸರೂ ಸೇರಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಘಟನೆಯಲ್ಲಿ ಕಲ್ಲು ಮತ್ತು ಗಾಜಿನ ಬಾಟಲಿಗಳ ಸುರಿಮಳೆಯಾಗಿದೆ. ಸುಮಾರು 10 ವಾಹನಗಳು ಜಖಂಗೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಘಟನಾ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. ಪೊಲೀಸರು 12 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಈ ಕುರಿತು ಮಹಾರಾಷ್ಟ್ರದ ಕೊಲ್ಲಾಪುರ ನಗರದ ಲಕ್ಷ್ಮೀಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.