ಕರ್ನಾಟಕ

karnataka

ETV Bharat / state

ಸುದೀರ್ಘ ‌ರಜೆಯಲ್ಲಿ ಡಾ. ದಾಸ್ತಿಕೊಪ್ಪ: ಬೀಮ್ಸ್​ಗೆ ಪ್ರಭಾರಿ ನಿರ್ದೇಶಕರ ನೇಮಕ - In a long leave Dr. The Dastikoppa

ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆಯೇ ಬೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ಸುದೀರ್ಘ ರಜೆ ಮೇಲೆ ತೆರಳಿದ್ದಾರೆ. ಇಂದಿನಿಂದ 30 ದಿನಗಳ ಕಾಲ ಡಾ.‌ದಾಸ್ತಿಕೊಪ್ಪ ರಜೆಯಲ್ಲಿರಲಿದ್ದಾರೆ. ಹಾಗಾಗಿ ಡಾ. ಉಮೇಶ್ ಕುಲಕರ್ಣಿ ಅವರನ್ನು ಬೀಮ್ಸ್​ಗೆ ಪ್ರಭಾರಿ ನಿರ್ದೇಶಕರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೀಮ್ಸ್
ಬೀಮ್ಸ್

By

Published : Jun 2, 2021, 9:07 PM IST

ಬೆಳಗಾವಿ: ಬೀಮ್ಸ್​ನ ಅಂಗರಚನಾ ವಿಭಾಗದ ಪ್ರಾಧ್ಯಾಪಕ ಡಾ. ಉಮೇಶ್ ಕುಲಕರ್ಣಿ ಅವರನ್ನು ಬೀಮ್ಸ್​ನ ಪ್ರಭಾರಿ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆಯೇ ಬೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ಸುದೀರ್ಘ ರಜೆ ಮೇಲೆ ತೆರಳಿದ್ದಾರೆ. ಇಂದಿನಿಂದ 30 ದಿನಗಳ ಕಾಲ ಡಾ.‌ದಾಸ್ತಿಕೊಪ್ಪ ರಜೆಯಲ್ಲಿರಲಿದ್ದಾರೆ. ಹಾಗಾಗಿ ಡಾ. ಉಮೇಶ್ ಕುಲಕರ್ಣಿ ಅವರನ್ನು ಬೀಮ್ಸ್​ಗೆ ಪ್ರಭಾರಿ ನಿರ್ದೇಶಕರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೀಮ್ಸ್ ಅವ್ಯವಸ್ಥೆ ಬಗ್ಗೆ ನಿತ್ಯವೂ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಅಲ್ಲದೇ ಡಿಸಿಎಂ ಲಕ್ಷ್ಮಣ ಸವದಿ ಕೂಡ ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್​ಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಬೀಮ್ಸ್ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬೀಮ್ಸ್ ಹಾಲಿ ನಿರ್ದೇಶಕರನ್ನು ಬದಲಿಸುವಂತೆಯೂ ಸಿಎಂ ಯಡಿಯೂರಪ್ಪ ಬಳಿ ಸವದಿ ಅವರು ಮನವಿ ಮಾಡಿದ್ದರು.

ಡಾ. ಉಮೇಶ್ ಕುಲಕರ್ಣಿ ಅವರನ್ನು ಬೀಮ್ಸ್​ನ ಪ್ರಭಾರಿ ನಿರ್ದೇಶಕರನ್ನಾಗಿ ನೇಮಿಸಿ ಆದೇಶ

ಶಾಸಕರಾದ ಸತೀಶ್ ಜಾರಕಿಹೊಳಿ‌, ಅಭಯ ಪಾಟೀಲ,‌ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಬೀಮ್ಸ್ ಅವ್ಯವಸ್ಥೆ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಇದೀಗ ಶುಕ್ರವಾರ ಸಿಎಂ ಕೂಡ ಬೆಳಗಾವಿಗೆ ಆಗಮಿಸಲಿದ್ದು, ಸುವರ್ಣ ಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ವೇಳೆ, ಪ್ರತಿಪಕ್ಷ ಶಾಸಕರು ಬೀಮ್ಸ್ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ. ಮುಜುಗರದಿಂದ ಪಾರಾಗಲು ಸರ್ಕಾರವೇ ಡಾ. ವಿನಯ್ ದಾಸ್ತಿಕೊಪ್ಪ ಅವರಿಗೆ ಸುದೀರ್ಘ ರಜೆ ನೀಡಿದೇಯೇ ಎಂಬ ಅನುಮಾನಗಳು ಮೂಡತೊಡಗಿವೆ.

ಓದಿ..ಎಲ್ರಿ ಬಿಮ್ಸ್ ನಿರ್ದೇಶಕ?.. ಅವರನ್ನು ಬಂಧಿಸಿ ಕರೆತನ್ನಿ ಎಂದು ಡಿಸಿಎಂ ಸವದಿ ಕೆಂಡಾಮಂಡಲ

ABOUT THE AUTHOR

...view details