ಬೆಳಗಾವಿ: ಕೇರಳ ಮಾದರಿಯ ಹ್ಯಾಂಡ್ ವಾಷಿಂಗ್ ಸ್ಟೇಷನ್ಗಳು ಜಿಲ್ಲೆಯ ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಕಾರ್ಯಾರಂಭ ಮಾಡಿವೆ.
ಹುಕ್ಕೇರಿ ಪಟ್ಟಣದ ಎಸ್.ಕೆ. ಪ್ರೌಢ ಶಾಲೆಯ 2000ನೇ ಸಾಲಿನ 40 ವಿದ್ಯಾರ್ಥಿಗಳು ಹಣ ಸೇರಿಸಿ ಎರಡೂ ಆಸ್ಪತ್ರೆಗಳ ಎದುರು ಕೈತೊಳೆಯುವ ಕೇಂದ್ರ ಅಳವಡಿಸಿದ್ದಾರೆ. ಹ್ಯಾಂಡ್ ವಾಷಿಂಗ್ ಸ್ಟೇಷನ್ಗೆ 500 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ಕೂರಿಸಲಾಗಿದೆ. ಹುಕ್ಕೇರಿ ತಾಲೂಕು ವೈದ್ಯಾಧಿಕಾರಿ ಡಾ.ರಾಜು ನರಸನ್ನರ ಹಾಗೂ ಸಂಕೇಶ್ವರ ಪಟ್ಟಣದ ಡಾ. ದತ್ತಾತ್ರೇಯ ದೊಡ್ಡಮನಿ ಅವರಿಗೆ ಎಸ್.ಕೆ. ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದು ಈ ಕೇಂದ್ರಗಳನ್ನು ಹಸ್ತಾಂತರಿಸಿದರು.
ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಕೇರಳ ಮಾದರಿಯ ಹ್ಯಾಂಡ್ ವಾಷಿಂಗ್ ಸ್ಟೇಷನ್ ಅಳವಡಿಕೆ ಕೇರಳ ರಾಜ್ಯದ ಸಾರ್ವಜನಿಕ ಸ್ಥಳ ಹಾಗೂ ಆಸ್ಪತ್ರೆ ಎದುರು ಹ್ಯಾಂಡ್ ವಾಷಿಂಗ್ ಸ್ಟೇಷನ್ ಅಳವಡಿಸಲಾಗಿದೆ. ಇದೇ ಮಾದರಿಯನ್ನು ಹಳೆ ವಿದ್ಯಾರ್ಥಿಗಳ ಸಂಘ ಹುಕ್ಕೇರಿ ತಾಲೂಕಿನಲ್ಲಿ ಅನುಷ್ಠಾನಕ್ಕೆ ತಂದಿದೆ. ಎರಡೂ ಆಸ್ಪತ್ರೆಗಳ ಮುಖ್ಯ ವೈದ್ಯಾಧಿಕಾರಿಗಳು ಹಳೇ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಸಂಬಂಧಿ ಮೊದಲು ಲಿಕ್ವಿಡ್ನಿಂದ ಕೈ ತೊಳೆದು ಆಸ್ಪತ್ರೆಯೊಳಗೆ ಹೋಗಬೇಕು. ಕೊರೊನಾ ಸೋಂಕು ಹರಡದಂತೆ ತಡೆಯಲು ಕೈತೊಳೆಯುವ ಕೇಂದ್ರ ಬಳಸುವಂತೆ ವೈದ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.