ಕರ್ನಾಟಕ

karnataka

ETV Bharat / state

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ: ಮಾಜಿ ಶಾಸಕ ಅಶೋಕ ಪಟ್ಟಣ - ಲೋಕಸಭಾ ಉಪಚುನಾವಣೆ

ನಾನೂ ಈಗಲೇ ಅಭ್ಯರ್ಥಿ ಆಗ್ತೇನಿ ಅಂದ್ರೂ ಪಕ್ಷ ನನಗೆ ಟಿಕೆಟ್ ನೀಡುತ್ತದೆ. ಆದ್ರೆ, ಈಗಿನ ಸಂದರ್ಭ ಸರಿಯಾಗಿಲ್ಲ. ಹೀಗಾಗಿ ನಾನು ಕಣಕ್ಕೆ ಇಳಿಯುವುದಿಲ್ಲ ಎಂದು ಮಾಜಿ ಶಾಸಕ‌ ಅಶೋಕ ಪಟ್ಟಣ ತಿಳಿಸಿದ್ದಾರೆ.

Ashok Pattan
ಮಾಜಿ ಶಾಸಕ ಅಶೋಕ ಪಟ್ಟಣ

By

Published : Oct 19, 2020, 6:40 PM IST

ಬೆಳಗಾವಿ:ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಆಸಕ್ತಿ ‌ಇಲ್ಲಾ. ಹೀಗಾಗಿ ರಾಜ್ಯ ರಾಜ್ಯಕಾರಣದಲ್ಲಿಯೇ ಇರಲು ಇಷ್ಟಪಡುತ್ತೇನೆ‌ ಎಂದು ರಾಮದುರ್ಗದ ಮಾಜಿ ಶಾಸಕ‌ ಅಶೋಕ ಪಟ್ಟಣ ಹೇಳಿದರು.

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ: ಮಾಜಿ ಶಾಸಕ ಅಶೋಕ ಪಟ್ಟಣ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಳೆದ ಭಾರಿಯೇ ನನ್ನ ಹೆಸರು ಫೈನಲ್ ಮಾಡಲಾಗಿತ್ತು. ಆಗ ನಾನು ಬೇಡ ಅಂದಾಗ ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ನಾನೂ ಈಗಲೇ ಅಭ್ಯರ್ಥಿ ಆಗ್ತೇನಿ ಅಂದ್ರೂ ಪಕ್ಷ ನನಗೆ ಟಿಕೆಟ್ ನೀಡುತ್ತದೆ. ಆದ್ರೆ, ಈಗಿನ ಸಂದರ್ಭ ಸರಿಯಾಗಿಲ್ಲ. ಹೀಗಾಗಿ ನಾನು ಕಣಕ್ಕೆ ಇಳಿಯುವುದಿಲ್ಲ. ಆದ್ರೂ ಈಗಾಗಲೇ ಕೆಪಿಸಿಸಿ ಅಧ್ಯಕ್ಷರು, ನಮ್ಮ ನಾಯಕರು ಈ ವರ್ಷವೂ ಉಪಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದಾರೆ. ಆದ್ರೆ, ನನಗೆ ಲೋಕಸಭೆ ಚುನಾವಣೆಗೆ ನಿಲ್ಲಲು ಇಚ್ಛೆ ಇಲ್ಲ. ಆದರಿಂದ‌ ಕಾಂಗ್ರೆಸ್ ಪಕ್ಷ ಭಯಸಿದರೂ ಪಕ್ಷದ ಮನವೊಲಿಸಿ ನಿಲ್ಲೋದಿಲ್ಲ ಅಂತಾ ತಿರಸ್ಕಾರ ಮಾಡುತ್ತೇನೆ ಎಂದು‌ ಸ್ಪಷ್ಟಪಡಿಸಿದರು.

ಇನ್ನು ರಾಮದುರ್ಗ ಕೇತ್ರದ ಶಾಸಕ ಮಹಾದೇವಪ್ಪ ಯಾದವಾಡ ಕ್ಷೇತ್ರದ ಜನರಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ. ಬಿಜೆಪಿ ಸರ್ಕಾರಕ್ಕು ಕೂಡ ಬಡವರ ಹಿಂದುಳಿದವರ ಬಗ್ಗೆ ಕನಿಕರವಿಲ್ಲ. ಕ್ಷೇತ್ರದ ನೇಕಾರರ ಸಮಸ್ಯೆಗಳ ಕುರಿತು ಹಲವು ಭಾರಿ ಪ್ರತಿಭಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷದ ಹಾನಿ ಪರಿಹಾರವೇ ಬಂದಿಲ್ಲ. ಈ ವರ್ಷ ಅವ್ರು ಎಲ್ಲಿಂದ ಕೊಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details