ಚಿಕ್ಕೋಡಿ:ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದ ಅಬಕಾರಿ ಪೊಲೀಸರು ಸುಮಾರು 4.92 ಲಕ್ಷ ರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡ ಘಟನೆ ಹುಕ್ಕೇರಿ ತಾಲೂಕಿನ ಬುಗಟೆ ಆಲೂರ ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆ ಹಿನ್ನೆಲೆ ಹುಕ್ಕೇರಿ ತಾಲೂಕಿನ ಬುಗಟೆ ಆಲೂರ ಬಳಿ ತೆರೆದ ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ವಾಹನ ತಡೆದು ತಪಾಸಣೆ ಮಾಡುವ ಸಮಯದಲ್ಲಿ ವಾಹನದಲ್ಲಿ ಅಕ್ರಮ ಮದ್ಯ ಸಿಕ್ಕಿದೆ.
ವಾಹನ ಪರ್ಮಿಟ್ ಪರಿಶೀಲನೆ ನಡೆಸಿದಾಗ ಮಹಾರಾಷ್ಟ್ರ ರಾಜ್ಯದ ರಹದಾರಿ ಪತ್ರ ಹೊಂದಿದ್ದು, ಇದು ಮಹಾರಾಷ್ಟ್ರದಲ್ಲಿಯೇ ಸಾಗಣೆ ಆಗಬೇಕಿದೆ. ಆದರೆ, ಅವರು ಮಹಾರಾಷ್ಟ್ರದಿಂದ ಕರ್ನಾಟಕದ ಮೂಲಕ ಸಾಗಿಸುತ್ತಿದ್ದು, ಕರ್ನಾಟಕದಿಂದ ಯಾವುದೇ ರಹದಾರಿ ಪತ್ರ ಹೊಂದಿರಲಿಲ್ಲ.
ಈ ಮದ್ಯ ಚುನಾವಣಾ ಸಮಯದಲ್ಲಿ ಕರ್ನಾಟಕದಲ್ಲಿ ಅಕ್ರಮವಾಗಿ ಸಾಗಾಣಿಕೆ ಆಗುತ್ತಿರುವುದು ಗೊತ್ತಾಗಿದೆ. ಸಂತ್ರ ಮದ್ಯ 800 ಪೆಟ್ಟಿಗೆ, 6984 ಲೀ. ಮಹಾರಾಷ್ಟ್ರ ರಾಜ್ಯದ ಸಂತ್ರ ಮದ್ಯ ಹಾಗೂ ಲಾರಿಯನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಕರಾಡ ತಾಲೂಕಿನ ಸೈದಾಪೂರದ ಆರೋಪಿ ಪ್ರದೀಪ ಶಿವಾಜಿರಾವ್ ಸಿರ್ಸೇಟ್ ಎಂಬಾತನನ್ನು ಬಂಧಿಸಲಾಗಿದೆ.