ಬೆಳಗಾವಿ: ಅನಧಿಕೃತವಾಗಿ ನಲ್ಲಿ ನೀರಿನ ಸಂಪರ್ಕ ಪಡೆದು, ನೀರು ಕದಿಯುತ್ತಿದ್ದ ಆಸಾಮಿಗೆ ಸಾರ್ವಜನಿಕರು ಬುಧವಾರ ಹಿಗ್ಗಾಮುಗ್ಗಾ ತಳಿಸಿದ ಘಟನೆ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
ನೀರನ್ನು ಕದಿಯುತ್ತಿದ್ದ ವ್ಯಕ್ತಿಗೆ ತಳಿಸಿದ ಗ್ರಾಮಸ್ಥರು - undefined
ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ಅಕ್ರಮವಾಗಿ ನೀರನ್ನು ಕದಿಯುತ್ತಿದ್ದ ವ್ಯಕ್ತಿಗೆ ಗ್ರಾಮಸ್ಥರು ತಳಿಸಿದ ಘಟನೆ ಬುಧವಾರ ನಡೆದಿದೆ.
ಇಲ್ಲಿನ ನಿವಾಸಿ ಅರುಣ ನಿಂಗಪ್ಪ ಪಾಟೀಲ ಗ್ರಾಮದ ಟ್ಯಾಂಕರ್ ಮೂಲಕ ನೇರವಾಗಿ ಮನೆಗೆ ನಲ್ಲಿಯ ಸಂಪರ್ಕ ಮಾಡಿಸಿಕೊಂಡಿದ್ದಾನೆ. ಗ್ರಾಮ ಪಂಚಾಯಿತಿಗೆ ನೀರಿನ ಕರವನ್ನು ಪಾವತಿಸದೇ ವಂಚಿಸಿದ್ದಾನೆ. ನೀರಿನ ಅಭಾವದಿಂದ ಗ್ರಾಮಕ್ಕೆ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಹೀಗಿರುವಾಗ ವಂಚಿಸಿ ನೀರು ಕದ್ದಿರುವುದು ಎಲ್ಲರ ಕೋಪಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ತಳಿತಕ್ಕೊಳಗಾದ ವ್ಯಕ್ತಿಯ ಮನೆಯಲ್ಲಿ 24 ಗಂಟೆ ನೀರಿನ ಸೌಲಭ್ಯವಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದ್ದು. ನೀರಿನ ವಂಚನೆ ಕುರಿತು ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.