ಕರ್ನಾಟಕ

karnataka

ETV Bharat / state

ಅಕ್ರಮವಾಗಿ ದನದ ಮಾಂಸ ಸಾಗಾಟ: ನಾಲ್ವರ ಬಂಧನ - Illagaly transpirted meat in chikkodi

ಚಿಕ್ಕೋಡಿಯಲ್ಲಿ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Chikkodi
Chikkodi

By

Published : Jun 24, 2020, 10:12 PM IST

ಚಿಕ್ಕೋಡಿ:ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಸಾಗಿಸುತ್ತಿದ್ದ ನಾಲ್ವರನ್ನು ಯುಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಹೊಸವಂಟಮೂರಿ ಗ್ರಾಮದ ಮಂಜುನಾಥ ಹಂಚಿನಮನಿ (23), ದಸ್ತಗೀರ ಬೇಪಾರಿ (28), ಕಾಲೆಸಾಬ ಬೇಪಾರಿ (35), ಶಾನೂಲ ಬೇಪಾರಿ (45) ಬಂಧಿತ ಆರೋಪಿಗಳು. ಇವರು ಹುಕ್ಕೇರಿ ತಾಲೂಕಿ‌ನ ಇಸ್ಲಾಂಪುರ ಗ್ರಾಮದ ಹದ್ದಿನಲ್ಲಿರುವ ಎನ್‌ಹೆಚ್-4 ರಸ್ತೆಯ ಗೋವಾ ಗೇಟ್ ಢಾಬಾ ಹತ್ತಿರ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ವೇಳೆ ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 800 ಕೆಜಿ ತೂಕದ ಸುಮಾರು 1,44,000 ರೂ. ಬೆಲೆಯ ಮಾಂಸ ವಶಪಡಿಸಿಕೊಂಡಿದ್ದು, ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details