ಕರ್ನಾಟಕ

karnataka

ETV Bharat / state

ಅಥಣಿ: ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದ ಐಗಳಿ ಪೊಲೀಸ್​... - Ramesh Bagade

ಅಥಣಿ ಸಿಪಿಐ ಶಂಕರಗೌಡ ಬಸನಗೌಡ ನೇತೃತ್ವದಲ್ಲಿ ಐಗಳಿ ಪಿಎಸ್ಐ ಶಿವರಾಜ್ ನಾಯಕವಾಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದಾರೆ.

Igali police have arrested a woman selling marijuana
ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದ ಐಗಳಿ ಪೊಲೀಸ್

By

Published : Sep 11, 2020, 9:38 PM IST

ಅಥಣಿ:ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಒರ್ವ ಮಹಿಳೆಯನ್ನು
ಐಗಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಮಹಿಳೆ ಕಸ್ತೂರಿ ರಮೇಶ್ ಬಾಗಡೆ (36) ಎಂದು ಗುರುತಿಸಲಾಗಿದ್ದು, ಬಂಧಿತರಿಂದ 16 ಸಾವಿರ ರೂಪಾಯಿ ಬೆಲೆಯ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕಸ್ತೂರಿ ಪತಿ ರಮೇಶ್ ಬಾಗಡೆ ಪರಾರಿಯಾಗಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡ ನೇತೃತ್ವದಲ್ಲಿ ಐಗಳಿ ಪಿಎಸ್ಐ ಶಿವರಾಜ್ ನಾಯಕವಾಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ABOUT THE AUTHOR

...view details